ಹುರುಳಿಕಾಯಿ ಹಸಿ ಕಾಯಿರಸ How To make green beans kayi rasa
Servings Prep Time
2 ರಿಂದ 3ಜನರಿಗೆ 5ನಿಮಿಷ
Cook Time
10ನಿಮಿಷ
Servings Prep Time
2 ರಿಂದ 3ಜನರಿಗೆ 5ನಿಮಿಷ
Cook Time
10ನಿಮಿಷ
Ingredients
ಒಗ್ಗರಣೆಗೆ:
Instructions
  1. ಹುರುಳಿಕಾಯಿಗಳನ್ನು ತೊಳೆದು ಒಂದು ಇಂಚು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ .
  2. ಒಂದು ಕಪ್ ನೀರನ್ನು ಕುದಿಯಲು ಇಡಿ , ನೀರು ಕುದ್ದ ನಂತರ ಅದಕ್ಕೆ ಹೆಚ್ಚಿತ್ತ ಹುರುಳಿಕಾಯಿ,ಅರಿಶಿಣ,ಉಪ್ಪು ಮತ್ತು ಕರಿಬೇವನ್ನು ಹಾಕಿ. ಹೋಳು ಬೆಂದಮೇಲೆ ಅದನ್ನು ಆರಲು ಬಿಡಿ.
  3. ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹಾಗೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
  4. ಕಾಯಿ, ಮೆಣಸಿನಕಾಯಿ, ಮತ್ತು ಹುರಿದ ಬೇಳೆಯನ್ನು ಸ್ವಲ್ಪ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿಕೊಂಡು ಅದನ್ನು ಬೆಂದು ಆರಿದ ಹುರುಳಿಕಾಯಿಗೆ ಸೇರಿಸಿ ಕಲಸಿ. ಅದಕ್ಕೆ ನಿಂಬೆಹಣ್ಣಿನ ರಸ ಬೆರಸಿ .
  5. ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಗಿಟ್ಟು, ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಉದ್ದಿನ ಬೇಳೆ ಹಾಕಿ ಅದನ್ನು ಕೆಂಪಾಗುವಷ್ಟು ಹುರಿದು, ತಯಾರಾದ ಒಗ್ಗರಣೆಯನ್ನು ಮೇಲಿನ ಮಿಶ್ರಣಕ್ಕೆ ಹಾಕಿ ಕಲಸಿದರೆ ರುಚಿಯಾದ ಹಸಿ ಕಾಯಿರಸ ಅನ್ನದೊಡನೆ ಸವಿಯಲು ಸಿದ್ದ.
Recipe Notes

For English version please visit the link below.:

Green beans Kayirasa