ಗೋದಿಹಿಟ್ಟಿನಿಂದ, ಇಲ್ಲವೆ ಸಣ್ಣ ರವೆ /ಚಿರೋಟೀ ರವೆಯಿಂದ, ಇಡೀ ಗೋದಿಯನ್ನು ಕೂಡ ಉಪಯೋಗಿಸಿ ಮಾಡುವಂತಹ ನಮ್ಮ ಈ ಸಿಹಿ ಗುಲ್ಪಾವಟೆ. ಯಾವುದರಿಂದ ತಯಾರಿಸಿದರೂ ರುಚಿಯಾಗಿರುವ ಈ ಸಿಹಿ ತಯಾರಿಸಲು ಸುಲಭ. ನಾನು ಇಲ್ಲಿ ಗೋದಿ ಹಿಟ್ಟನ್ನು ಉಪಯೋಗಿಸಿ ಮಾಡಿದ್ದೀನಿ.
Ingredients
- 1/2 ಕಪ್ ಗೋದಿಹಿಟ್ಟು
- 1/4 ಕಪ್ ಬೆಲ್ಲ
- 1 ರಿಂದ 2 TBSP ತುಪ್ಪ
- 2 TBSP ನೀರು
- 1/4 ಕಪ್ ಕಾಯಿ ತುರಿ
- 4 ರಿಂದ 5 ಗೋಡಂಬಿ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ
- 1 TBSP ಒಣ ದ್ರಾಕ್ಷಿ
- 1/8 tsp ಏಲಕ್ಕಿ ಪುಡಿ
Instructions
- 2 ಚಮಚ ತುಪ್ಪವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಬಿಸಿ ಮಾಡಲು ಇಡಿ. ಮೊದಲು ಗೋಡಂಬಿ ಹಾಗು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
- ಅದಕ್ಕೆ ಇನ್ನೊಂಚೂರು ತುಪ್ಪವನ್ನು ಹಾಕಿ ಗೋದಿಹಿಟ್ಟನ್ನು ಹಸಿ ವಾಸನೆ ಹೋಗಿ ಒಳ್ಳೆ ಘಮ ಬರುವವರೆಗೆ ಇಲ್ಲವೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಈಗ ಉರಿಯಾರಿಸಿ ಒಂದು ಬೇರೆ ಪಾತ್ರೆಗೆ ತೆಗೆದು ಇದಕ್ಕೆ ಕಾಯಿಯನ್ನು ಹಾಕಿ ಕಲಸಿ ಒಂದು ಹದಿನೈದು ನಿಮಿಷಗಳ ಕಾಲ ಮುಚ್ಚಿಟ್ಟಿರಿ.
- ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಗಿ ಕರಗಿಸಿ. ಕಸವಿದ್ದಲ್ಲಿ ಶೋಧಿಸಿ.
- ಪಾಕದ ಹದ ಒಂದು ಎಳೆ ಬಂದಾಗ ಅದಕ್ಕೆ ಹುರಿದಿಟ್ಟ ಗೋಡಂಬಿ ದ್ರಾಕ್ಷಿ ಹಾಕಿ ಒಲೆಯಾರಿಸಿ ಉಳಿದ ತುಪ್ಪ ಬೇಕಾದಲ್ಲಿ ಹೆಚ್ಚು ತುಪ್ಪವನ್ನೂ ಹಾಕಿ, ಏಲಕ್ಕಿ ಪುಡಿ ಹಾಗು ಕಾಯಿ-ಗೋದಿಹಿಟ್ಟಿನ ಮಿಶ್ರಣವನ್ನು ಹಾಕಿ ಕಲಕಿ.
- ಅಮೇಲೆ ಬೇಕಾದ ಆಕಾರ ಇಲ್ಲವೆ ಉಂಡೆಗಳನ್ನಗಿ ಮಾಡಿ. ಬೇಕಾದಲ್ಲಿ ಈ ಉಂಡೆಗಳನ್ನು ನೀವು ಕೊಬ್ಬರಿ ತುರಿಯಲ್ಲಿ ಅದ್ದಬಹುದು.
- ರುಚಿಯಾದ ಗುಲ್ಪಾವಟೆಯನ್ನು ಸವಿಯಿರಿ.
Recipe Notes
- ಪಾಕ ನೀರಾಗಿದ್ದಲ್ಲಿ ಸ್ವಲ್ಪ ಹೊತ್ತು ಒಲೆಯಮೇಲೆ ಸಣ್ಣ ಉರಿಯಲ್ಲಿ ಇಟ್ಟು ಸ್ವಲ್ಪ ಗಟ್ಟಿಯಾಗುವ ತನಕ ಕಲಕಿ.
- ಗಟ್ಟಿಯಾದಲ್ಲಿ ಸ್ವಲ್ಪ ನೀರನ್ನು ಹಾಕಿ ಸ್ವಲ್ಪ ಹೊತ್ತು ಒಲೆಯಮೇಲೆ ಸಣ್ಣ ಉರಿಯಲ್ಲಿ ಇಟ್ಟು ಸ್ವಲ್ಪ ಗಟ್ಟಿಯಾಗುವ ತನಕ ಕಲಕಿ.