ನೆಲ್ಲಿಕಾಯಿ ತೊಕ್ಕು, How to make Thokku Recipe
Servings Prep Time
1cup 10minutes
Cook Time
5minutes
Servings Prep Time
1cup 10minutes
Cook Time
5minutes
Instructions
  1. ನೆಲ್ಲಿಕಾಯನ್ನು ಚೆನ್ನಾಗಿ ತೊಳೆದು ಚೆನ್ನಾಗಿ ಒಣಗಿಸಿ ತುರಿದಿಟ್ಟುಕೊಳ್ಳಿ ಮೆಣಸಿನಕಾಯನ್ನು ತೊಳೆದು ಬತ್ತೆಯಲ್ಲಿ ಒಣಗಿಸಿ. ನೀರಿನ ಅಂಶ ಇರಬಾರದು.
  2. ಮೊದಲು ನೆಲ್ಲಿಕಾಯನ್ನು ತುರಿದಿಟ್ಟುಕೊಳ್ಳಿ .
  3. ಸುಮಾರಾಗಿ ಒಂದು ಕಪ್ಪಿನಷ್ಟು ಸಿಗತ್ತೆ.
  4. ಒಂದು ಸಣ್ಣ ಬಾಣಲೆಯನ್ನು ಬಿಸಿಗಿಟ್ಟೂ ಮೆಂತ್ಯವನ್ನು ಚಟಪಟ ಅನ್ನುವಷ್ಟು ಇಲ್ಲವೆ ಕೆಂಪಾಗುವಷ್ಟು ಹುರಿದು, ಆರಿದಮೇಲೆ ಪುಡಿಮಾಡಿಟ್ಟುಕೊಳ್ಳಿ .
  5. ಮಿಕ್ಸರಿನ ಜಾರಿಗೆ ತುರಿದ ನೆಲ್ಲಿಕಾಯಿ, ಮೆಣಸಿನಕಾಯಿ, ಮೆಂತ್ಯ ಪುಡಿ, ಅರಿಶಿಣ ಹಾಗು ಉಪ್ಪನ್ನು ಹಾಕಿ ಸಣ್ಣಗೆ ರುಬ್ಬಿ.
  6. ಈಗ ತೊಕ್ಕು ಸಿದ್ಧ. ಇದನ್ನು ಗಾಜಿನ ಇಲ್ಲವೆ ಪಿಂಗಾಣಿ ಶೀಶೆಯಲ್ಲಿ ತುಂಬಿಡಿ. ಬೇಕಾದಾಗ ಎಷ್ಟು ಬೇಕೋ ಅಷ್ಟಕ್ಕೆ ಒಗ್ಗರಣೆಹಾಕಿಕೊಂಡು ಸವಿಯಿರಿ.
  7. ಇದರ ಜೊತೆಗೆ ನೀವು ಸಣ್ಣಗೆ ಹೆಚ್ಚಿದ ಈರುಳ್ಳಿ, ಸೌತೆಕಾಯಿಯನ್ನು ಬೆರಸಿ ಕೂಡ ಉಪಯೋಗಿಸಬಹುದು.