ತೊಗರಿಬೇಳೆ ಸಬ್ಸಿಗೆಸೊಪ್ಪಿನ ಪಲ್ಯ Toor dal and Dill Palya
Servings Prep Time
2 to 3people 10minutes
Cook Time
20minutes
Servings Prep Time
2 to 3people 10minutes
Cook Time
20minutes
Instructions
  1. ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಾಗೇ ಬೇಳೆಯನ್ನೂ ಕೂಡ ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ, ಹೆಚ್ಚಿದ ಸೊಪ್ಪು ಮತ್ತು ನೀರನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ ೨ ಕೂಗು ಕೂಗಿಸಿ . ಕುಕ್ಕರ್ ಆರಿದ ಮೇಲೆ ಒಗ್ಗರಣೆಗಿಡಿ.
  2. ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಮೀಡಿಯಮ್ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಕಾದಮೇಲೆ ಸಾಸಿವೆ, ಇಂಗು, ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ನಂತರ ಮುರಿದ ಒಣಮೆಣಸಿನಕಾಯಿ ತುಂಡನ್ನು ಹಾಕಿ ಕಲಕಿ .
  3. ಈಗ ಇದಕ್ಕೆ ಬೆಂದಿರುವ ಬೇಳೆ ಹಾಗು ಸೊಪ್ಪಿನ ಮಿಶ್ರಣವನ್ನೂ ಜೊತೆಗೆ ಉಪ್ಪು, ಕರಿಬೇವಿನ ಸೊಪ್ಪನ್ನೂ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆ ಒಲೆಯಮೇಲಿಟ್ಟಿರಿ .
  4. ಐದು ನಿಮಿಷ ಆದಮೇಲೆ ಒಲೆಯನ್ನಾರಿಸಿ ಸೊಪ್ಪಿಗೆ ಕಾಯಿ ಹಾಕಿ ಕಲಸಿ.
  5. ಈಗ ನಿಮಗೆ ಆರೋಗ್ಯಕರ ಬೇಳೆ ಮತ್ತು ಸೊಪ್ಪಿನ ಪಲ್ಯ ತಿನ್ನಲು ಸಿದ್ಧ. ಇದನ್ನು ಸಾರಿನ ಜೊತೆ, ಚಪಾತಿ, ರೊಟ್ಟಿ ಜೊತೆಯಲ್ಲೂ ಸವಿಯಬಹುದು.
Recipe Notes
  1. ಬೇಳೆ ಬೇಯಿಸುವುದಕ್ಕೆ ತುಂಬಾ ನೀರನ್ನು ಹಾಕಬೇಡಿ.