Go Back

ತೊಗರಿಬೇಳೆ ಸಬ್ಸಿಗೆಸೊಪ್ಪಿನ ಪಲ್ಯ Toor dal and Dill Palya

Prep Time 10 minutes
Cook Time 20 minutes
Total Time 30 minutes
Servings 2 people

Ingredients
  

  • 1 ಕಪ್ ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು
  • 3/4 ಕಪ್ ತೊಗರಿ ಬೇಳೆ
  • 1/4 tsp ಅರಿಶಿಣ
  • 1 ಕಪ್ ನೀರು
  • 1/4 ಕಪ್ ಕಾಯಿ ತುರಿ

ಒಗ್ಗರಣೆ:

  • 3 tsp ಎಣ್ಣೆ
  • ಸ್ವಲ್ಪ ಇಂಗು
  • 1 tsp ಸಾಸಿವೆ
  • 1 tsp ಜೀರಿಗೆ
  • 2 ಕೆಂಪು ಮೆಣಸಿನಕಾಯಿ

Instructions
 

  • ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಾಗೇ ಬೇಳೆಯನ್ನೂ ಕೂಡ ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ, ಹೆಚ್ಚಿದ ಸೊಪ್ಪು ಮತ್ತು ನೀರನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ ೨ ಕೂಗು ಕೂಗಿಸಿ . ಕುಕ್ಕರ್ ಆರಿದ ಮೇಲೆ ಒಗ್ಗರಣೆಗಿಡಿ.
  • ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಮೀಡಿಯಮ್ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಕಾದಮೇಲೆ ಸಾಸಿವೆ, ಇಂಗು, ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ನಂತರ ಮುರಿದ ಒಣಮೆಣಸಿನಕಾಯಿ ತುಂಡನ್ನು ಹಾಕಿ ಕಲಕಿ .
  • ಈಗ ಇದಕ್ಕೆ ಬೆಂದಿರುವ ಬೇಳೆ ಹಾಗು ಸೊಪ್ಪಿನ ಮಿಶ್ರಣವನ್ನೂ ಜೊತೆಗೆ ಉಪ್ಪು, ಕರಿಬೇವಿನ ಸೊಪ್ಪನ್ನೂ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆ ಒಲೆಯಮೇಲಿಟ್ಟಿರಿ .
  • ಐದು ನಿಮಿಷ ಆದಮೇಲೆ ಒಲೆಯನ್ನಾರಿಸಿ ಸೊಪ್ಪಿಗೆ ಕಾಯಿ ಹಾಕಿ ಕಲಸಿ.
  • ಈಗ ನಿಮಗೆ ಆರೋಗ್ಯಕರ ಬೇಳೆ ಮತ್ತು ಸೊಪ್ಪಿನ ಪಲ್ಯ ತಿನ್ನಲು ಸಿದ್ಧ. ಇದನ್ನು ಸಾರಿನ ಜೊತೆ, ಚಪಾತಿ, ರೊಟ್ಟಿ ಜೊತೆಯಲ್ಲೂ ಸವಿಯಬಹುದು.

Notes

  1. ಬೇಳೆ ಬೇಯಿಸುವುದಕ್ಕೆ ತುಂಬಾ ನೀರನ್ನು ಹಾಕಬೇಡಿ.
Keyword Palya, Side Dishes