Go Back

ನೆಲ್ಲಿಕಾಯಿ ಲೇಹ

Prep Time 10 minutes
Cook Time 15 minutes
Total Time 25 minutes
Servings 1 cup

Ingredients
  

  • 5 or 1 cup Amla/nellikayi/Gooseberry ನೆಲ್ಲಿಕಾಯಿ ತುರಿ
  • 1 cup ಬೆಲ್ಲ
  • 1 cup ನೀರು ಅರ್ಧ ನೀರು ಬೆಲ್ಲದ ಪಾಕ ಮಾಡಲು ಮತ್ತು ಅರ್ಧ ನೆಲ್ಲಿಕಾಯಿ ಬೇಯಿಸುವುದಕ್ಕೆ
  • 1 TBSP ಸಕ್ಕರೆ
  • 1/4 tsp ಶುಂಠಿ ಪುಡೀ ಬೇಕಾದಲ್ಲಿ ಉಪಯೋಗಿಸಿ

Instructions
 

  • ಮೊದಲಿಗೆ ನೆಲ್ಲಿಕಾಯಿ ಚೆನ್ನಾಗಿ ತೊಳೆದು ಅದನ್ನು ಒಂದು ಬತ್ತೆಯಲ್ಲಿ ಒರೆಸಿ ತುರಿದು ಇಟ್ಟುಕೊಳ್ಳಿ .
  • ತುರಿಗೆ ಅರ್ಧ ಕಪ್ ನೀರು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಒಲೆಯಮೇಲೆ ಮದ್ಯಮ ಉರಿಯಲ್ಲಿ ಇಟ್ಟು 5 ನಿಮಿಷ ಬೇಯಲು ಬಿಡಿ.
  • ತುರಿ ಬೇಯುವಾಗ,ಬೇರೆ ಪಾತ್ರೆಯಲ್ಲಿ ಬೆಲ್ಲ ಮತ್ತು ಉಳಿದ ನೀರನ್ನು ಹಾಕಿ ಪಾಕ ಮಾಡಲು ಇಡಿ . ಬೆಲ್ಲ ಕರಗಿದ ಮೇಲೆ ಅದನ್ನು ಒಂದು ಒಳ್ಳೆ ಬಟ್ಟೆಯನ್ನು ಉಪಯೋಗಿಸಿ ಶೋಧಿಸಿ ಮತ್ತೆ ಆ ಪಾಕವನ್ನು ಒಲೆಯ ಮೇಲಿಟ್ಟು ಎಳೆ ಪಾಕ ಬರುವವರೆಗೆ ಬಿಡಬೇಕು.
  • ಎಳೆಪಾಕ ಬಂದಮೇಲೆ ಈ ಪಾಕವನ್ನು ಬೇಯುತ್ತಿರುವ ನೆಲ್ಲಿಕಾಯಿಗೆ ಹಾಕಿ ಕಲಕಿ.
  • ಪಾಕದಜೊತೆ ಸಕ್ಕರೆ ಹಾಕುವುದಾದಲ್ಲಿ ಶುಂಠಿ ಹುಡಿಯನ್ನು ಹಾಕಿ ಲೇಹ ಗಟ್ಟಿಯಾಗುವ ತನಕ ಕಲಕುತ್ತಿರಿ.
  • ಲೇಹ ಗಟ್ಟಿಯಾದನಂತರ ಆರಲು ಬಿಡಿ.
  • ಆರೋಗ್ಯಕರ ಮತ್ತು ರುಚಿಕರ ಲೇಹ ಸವಿಯಲು ಸಿದ್ದ.
Keyword Snacks