3 ರಿಂದ 4ಹಸಿರುಮೆಣಸಿನ ಕಾಯಿಹೆಚ್ಚು ಅಥವ ಕಡಿಮೆ ಮಾಡಿಕೊಳ್ಳಬಹುದು
1ಸಣ್ಣ ನಿಂಬೆಹಣ್ಣಿನ ರಸ
ಚಿಟಕಿ ಅರಿಶಿಣ
1/2tspಉಪ್ಪು ಇಲ್ಲವೆ ರುಚಿಗೆ ತಕ್ಕಷ್ಟು
ಸ್ವಲ್ಪ ಕರಿಬೇವಿನ ಸೊಪ್ಪು
ಹೆಚ್ಚಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ:
1/2tspತುಪ್ಪ
1/2tspಸಾಸಿವೆ
1/2tspಉದ್ದಿನ ಬೇಳೆ
Instructions
ಹುರುಳಿಕಾಯಿಗಳನ್ನು ತೊಳೆದು ಒಂದು ಇಂಚು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ .
ಒಂದು ಕಪ್ ನೀರನ್ನು ಕುದಿಯಲು ಇಡಿ , ನೀರು ಕುದ್ದ ನಂತರ ಅದಕ್ಕೆ ಹೆಚ್ಚಿತ್ತ ಹುರುಳಿಕಾಯಿ,ಅರಿಶಿಣ,ಉಪ್ಪು ಮತ್ತು ಕರಿಬೇವನ್ನು ಹಾಕಿ. ಹೋಳು ಬೆಂದಮೇಲೆ ಅದನ್ನು ಆರಲು ಬಿಡಿ.
ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹಾಗೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
ಕಾಯಿ, ಮೆಣಸಿನಕಾಯಿ, ಮತ್ತು ಹುರಿದ ಬೇಳೆಯನ್ನು ಸ್ವಲ್ಪ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿಕೊಂಡು ಅದನ್ನು ಬೆಂದು ಆರಿದ ಹುರುಳಿಕಾಯಿಗೆ ಸೇರಿಸಿ ಕಲಸಿ. ಅದಕ್ಕೆ ನಿಂಬೆಹಣ್ಣಿನ ರಸ ಬೆರಸಿ .
ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಗಿಟ್ಟು, ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಉದ್ದಿನ ಬೇಳೆ ಹಾಕಿ ಅದನ್ನು ಕೆಂಪಾಗುವಷ್ಟು ಹುರಿದು, ತಯಾರಾದ ಒಗ್ಗರಣೆಯನ್ನು ಮೇಲಿನ ಮಿಶ್ರಣಕ್ಕೆ ಹಾಕಿ ಕಲಸಿದರೆ ರುಚಿಯಾದ ಹಸಿ ಕಾಯಿರಸ ಅನ್ನದೊಡನೆ ಸವಿಯಲು ಸಿದ್ದ.