Go Back

hagalakayi kayirasa recipe ಹಾಗಲಕಾಯಿ ಕಾಯಿರಸ/ಗೊಜ್ಜು

Prep Time 10 minutes
Cook Time 15 minutes
Total Time 25 minutes
Servings 2 ಜನರಿಗೆ

Ingredients
  

  • 2 ಹಾಗಲಕಾಯಿ /hagalakayi
  • 1 ಕಪ್ ಕಾಯಿತುರಿ
  • ಸಣ್ಣ ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು ನೀರಿನಲ್ಲಿ ನೆನಸಿಡಿ
  • 1 ನಿಂಬಹಣ್ಣಿನ ಗಾತ್ರದಷ್ಟು ಬೆಲ್ಲ
  • 1/2 tsp ಸಾಸಿವೆ
  • 1 tsp ಉಪ್ಪು
  • 10 ರಿಂದ 12 ಹಸಿರುಮೆಣಸಿನಕಾಯಿ ಖಾರ ಕಮ್ಮಿ ಬೇಕಾದಲ್ಲಿ ಮೆಣಸಿನಕಾಯಿ ಕಮ್ಮಿ ಹಾಕಿ
  • 1/4 tsp ಅರಿಶಿಣ
  • 2 ರಿಂದ 3 ಕಪ್ ನೀರು
  • 1 TBSP ಉದ್ದಿನಬೇಳೆ
  • 10 ರಿಂದ 15 ಕರಿಬೇವಿನ ಸೊಪ್ಪು
  • ಸ್ವಲ್ಪ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ

  • 2 TBSP ಎಣ್ಣೆ
  • 1/2 tsp ಸಾಸಿವೆ
  • 1/2 tsp ಉದ್ದಿನಬೇಳೆ

Instructions
 

  • ಗೊಜ್ಜಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳಿ.
  • ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ.
  • ಬಾಣಲೆಗೆ ಎರಡು ಚಮಚ ಎಣ್ನೆಯನ್ನು ಹಾಕಿ ಮೀಡಿಯಮ್ ಉರಿಯಲ್ಲಿ ಕಾಯಲು ಇಡಿ.ಎಣ್ಣೇ ಕಾದಮೇಲೆ ಒಗ್ಗರಣೆಗೆ ಹೇಳಿರುವ ಸಾಸಿವೆಯನ್ನು ಹಾಕಿ, ಸಾಸಿವೆ ಚಟಗುಟ್ಟಿದಮೇಲೆ ಉದ್ದಿನಬೇಳೆಯನ್ನು ಹಾಕಿ ಅದು ಕೆಂಪಾದಮೇಲೆ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ. ಇದಕ್ಕೆ ಕರಿಬೇವು ಮತ್ತು ಅರ್ಶಿಣವನ್ನೂ ಹಾಕಿ ಕಲಕಿ.
  • ಇದನ್ನು 6 ರಿಂದ 7 ನಿಮಿಷ ಚೆನ್ನಾಗಿ ಹುರಿಯಿರಿ.
  • ಇನ್ನೊಂದು ಸೌಟಿನಲ್ಲಿ ಉದ್ದಿನಬೇಳೆಯನ್ನು ಎಣ್ಣೆಹಾಕದೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
  • ಮಿಕ್ಸರಿನಲ್ಲಿ ಕಾಯಿ, ಮೆಣಸಿನಕಾಯಿ, ಹುಣಸೆಹಣ್ಣು(ನೀರಿನ ಜೊತೆಗೆ ) ಸಾಸಿವೆ, ಹುರಿದ ಉದ್ದಿನಬೇಳೆ ಎಲ್ಲವನ್ನೂ ಹಾಕಿ ತರಿಯಾಗಿ ರುಬ್ಬಿ. ನೀರು ಬೇಕಾದಲ್ಲಿ ಹಾಕಿ ರುಬ್ಬಿ .
  • ಇದನ್ನು ಹುರಿಯುತ್ತಿರುವ ಹಾಗಲಕಾಯಿಗೆ ಹಾಕಿ, ಬೆಲ್ಲ, ನೀರು, ಮತ್ತು ಉಪ್ಪನ್ನೂ ಹಾಕಿ 8 ರಿಂದ 10 ನಿಮಿಷಗಳು ಚೆನ್ನಾಗಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ಕುದಿಸಿ.
  • ಈಗ ಒಲೆಯಾರಿಸಿ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಹಾಗಲಕಾಯಿ ಕಾಯಿ ರಸ/ ಗೊಜ್ಜು ಸವಿಯಲು ಸಿದ್ಧ . ಇದನ್ನು ಅನ್ನದ ಜೊತೆಯಲ್ಲಿ ಇಲ್ಲವೆ ದೋಸೆ, ರೊಟ್ಟಿ, ಚಪಾತಿಯ ಜೊತೆಯಲ್ಲೂ ತಿನ್ನಬಹುದು . ಚೆನ್ನಗಿ ಕುದಿಸಿಟ್ಟರೆ 2 ದಿನ ಇಟ್ಟು ಕೂಡ ತಿನ್ನಬಹುದು.
Keyword Side Dishes