ಗೊಜ್ಜಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳಿ.
ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ.
ಬಾಣಲೆಗೆ ಎರಡು ಚಮಚ ಎಣ್ನೆಯನ್ನು ಹಾಕಿ ಮೀಡಿಯಮ್ ಉರಿಯಲ್ಲಿ ಕಾಯಲು ಇಡಿ.ಎಣ್ಣೇ ಕಾದಮೇಲೆ ಒಗ್ಗರಣೆಗೆ ಹೇಳಿರುವ ಸಾಸಿವೆಯನ್ನು ಹಾಕಿ, ಸಾಸಿವೆ ಚಟಗುಟ್ಟಿದಮೇಲೆ ಉದ್ದಿನಬೇಳೆಯನ್ನು ಹಾಕಿ ಅದು ಕೆಂಪಾದಮೇಲೆ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ. ಇದಕ್ಕೆ ಕರಿಬೇವು ಮತ್ತು ಅರ್ಶಿಣವನ್ನೂ ಹಾಕಿ ಕಲಕಿ.
ಇದನ್ನು 6 ರಿಂದ 7 ನಿಮಿಷ ಚೆನ್ನಾಗಿ ಹುರಿಯಿರಿ.
ಇನ್ನೊಂದು ಸೌಟಿನಲ್ಲಿ ಉದ್ದಿನಬೇಳೆಯನ್ನು ಎಣ್ಣೆಹಾಕದೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
ಮಿಕ್ಸರಿನಲ್ಲಿ ಕಾಯಿ, ಮೆಣಸಿನಕಾಯಿ, ಹುಣಸೆಹಣ್ಣು(ನೀರಿನ ಜೊತೆಗೆ ) ಸಾಸಿವೆ, ಹುರಿದ ಉದ್ದಿನಬೇಳೆ ಎಲ್ಲವನ್ನೂ ಹಾಕಿ ತರಿಯಾಗಿ ರುಬ್ಬಿ. ನೀರು ಬೇಕಾದಲ್ಲಿ ಹಾಕಿ ರುಬ್ಬಿ .
ಇದನ್ನು ಹುರಿಯುತ್ತಿರುವ ಹಾಗಲಕಾಯಿಗೆ ಹಾಕಿ, ಬೆಲ್ಲ, ನೀರು, ಮತ್ತು ಉಪ್ಪನ್ನೂ ಹಾಕಿ 8 ರಿಂದ 10 ನಿಮಿಷಗಳು ಚೆನ್ನಾಗಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ಕುದಿಸಿ.
ಈಗ ಒಲೆಯಾರಿಸಿ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಹಾಗಲಕಾಯಿ ಕಾಯಿ ರಸ/ ಗೊಜ್ಜು ಸವಿಯಲು ಸಿದ್ಧ . ಇದನ್ನು ಅನ್ನದ ಜೊತೆಯಲ್ಲಿ ಇಲ್ಲವೆ ದೋಸೆ, ರೊಟ್ಟಿ, ಚಪಾತಿಯ ಜೊತೆಯಲ್ಲೂ ತಿನ್ನಬಹುದು . ಚೆನ್ನಗಿ ಕುದಿಸಿಟ್ಟರೆ 2 ದಿನ ಇಟ್ಟು ಕೂಡ ತಿನ್ನಬಹುದು.