[three_fourth_last]
ಸ್ವಯಂಪಾಕ ಅಭಿಮಾನಿಗಳಿಗೆ,
“ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಮಾತು ಸರ್ವಕಾಲಕ್ಕೂ ಸತ್ಯ. ನಮ್ಮ ಪೂರ್ವಿಕರು ಆಚಾರ – ವಿಚಾರ, ಆಹಾರ – ವಿಹಾರಗಳಿಗೆ ಒತ್ತುಕೊಟ್ಟು ಆರೋಗ್ಯದ ಜೀವನ ನಡೆಸಿದರು. ಋತುಮಾನಗಳಿಗೆ ತಕ್ಕ ಹಾಗೆ ಆಹಾರದಲ್ಲಿ ಬದಾಲಾವಣೆ ಮಾಡಿಕೊಂಡು ದೇಹವನ್ನು ರೋಗಮುಕ್ತವನ್ನಾಗಿಸಿಕೊಂಡು ಸಧೃ್ಡಡರಾಗಿದ್ದರು.ಚಿಕ್ಕ ಪುಟ್ಟ ಕಾಯಿಲೆಗಳು ದಿನನಿತ ಸೇವಿಸುವ ತರಕಾರಿ, ಹಣ್ಣು ಹಂಪಲು ಗೆಡ್ಡೆ ಗೆಣಸು ದವಸ-ಧಾನ್ಯಗಳಿಂದಲೇ ಗುಣವಾಗುತ್ತದೆ ಎಂದು ಬಲವಾಗಿ ನಂಬಿದ್ದರು .ಆದರೆ ಇಂದು ಆಧುನಿಕತೆಯ ಜೀವನ ಶೈಲಿ ಅಡುಗೆ ಮನೆಯನ್ನೆ ಬದಲಾಯಿಸಿದೆ. ಆಹಾರ ಪದ್ಧತಿಯನ್ನೆ ಬುಡಮೇಲು ಮಾಡಿದೆ . ಸಂಸ್ಕರಿಸಿದ ಆಹಾರ (processed foods) ದರ್ಶಿನಿಗಳ ಉಪಹಾರ, ready to eat ಮುಂತಾದ ದಿಡೀರ್ ಖಾದ್ಯಗಳ ಆರ್ಭಟದಲ್ಲಿ ಹಿಂದಿನ ಕಾಲದ ಮನೆ ಅಡುಗೆಗಳು ಮಾಸುತ್ತಾ ಬರುತ್ತಿದೆ. ಈಗಿನ ಆಹಾರ ಪದ್ದತಿಗಳು ಹೊಸಹೊಸ ರೋಗಗಳನ್ನು ಹುಟ್ಟುಹಾಕುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ. ಇದನ್ನೆಲ್ಲ ನೋಡುತ್ತಿರುವ ನನಗೆ ಆರೋಗ್ಯ ಮೂಲದ everyday recipes ಎಲ್ಲರಿಗೂ ತಿಳಿಸುವ ಉದ್ದೇಶವೇ ಈ ಸ್ವಯಂಪಾಕದ ಹುಟ್ಟು.
Originally ನಾನು ಚಿಕ್ಕಮಗಳೂರು ಹತ್ತಿರದ ಒಂದು ಸಣ್ನ ಹಳ್ಳಿ ಕೂದುವಳ್ಳಿಯವಳು. ಮೈಸೂರಿನ SJCE ನಲ್ಲಿ ಇಂಜಿನಿಯರಿಂಗ್ ಮುಗಿಸಿ, ೧೯೯೩ರಲ್ಲಿ,ಮದುವೆಯನಂತರ ಅಮೇರಿಕ ಪಯಣ, ಇಲ್ಲೆ ನಮ್ಮ ವಾಸ. ನನ್ನ ತಂದೆ MSEB ನಲ್ಲಿ Engineer.ಆಗಾಗ್ಗೆ ವರ್ಗಾವಣೆಗಳು. ಹೀಗಾಗಿ ಆ ಊರುಗಳ ವೈವಿದ್ಯ ಖಾದ್ಯಗಳ ಪರಿಚಯ.ತಂದೆ ಮಲೆನಾಡು, ಅಮ್ಮ ಬಯಲುಸೀಮೆ, ಅತ್ತೆ ಮನೆ ಉತ್ತರ ಕರ್ನಾಟಕ, so, ಮೂರು ಸೀಮೆಯ ಅಡುಗೆ ನಮ್ಮ ಮನೆಯಲ್ಲಿ .ಅಲ್ಲದೆ ನನ್ನ ಭಾವ biochemist, ಅವರು ಹಿರಿಯರ ಆಹಾರ ಪದ್ಧತಿಯೇ ಆರೋಗ್ಯದ ಗುಟ್ಟು ಎಂಬುದನ್ನು ವೈಙ್ನಾನಿಕ ವಿಶ್ಲೇಷಣೆಯೊಂದಿಗೆ ಹೇಳುವುದೂಕೂಡ ನನ್ನ ಈ ಪ್ರಯತ್ನಕ್ಕೆ ಪ್ರೇರಣೆ.
ನಮ್ಮ ಕನ್ನಡದ ವೀಡಿಯೋಗಳನ್ನು ಸ್ವಯಂಪಾಕ ಯೂಟ್ಯೂಬ್ ಚಾನಲ್ ವೀಕ್ಷಿಸಿ.
Wish you all happy and healthy cooking 🙂
ರಾಜಿ ಚಂದ್ರಶೇಖರ[/three_fourth_last]
[three_fourth_last]
ಮಮತ ಪ್ರಭಾಕರ : ಮಲೆನಾಡಿನ ಮಡಿಲ ಶೃಂಗೇರಿಯಲ್ಲಿ ಹುಟ್ಟು ಬೆಳೆದ ನಾನು ಸೈಕಾಲಜಿಯಲ್ಲಿ M S ಮಾಡಿದ್ದೀನಿ. ಆರೋಗ್ಯಕ್ಕೆ ಒಳ್ಳೆಯ ಪರಿಸರ, ತೃಪ್ತ ಜೀವನ ಮತ್ತು ಋತುಮಾನಕ್ಕೆ ತಕ್ಕ ಆಹಾರ ಇದು ನನ್ನ ನಂಬಿಕೆ. ದಿನ ನಿತ್ಯದ ಆಹಾರದಲ್ಲೆ ನಾವು ನಮ್ಮ ಆರೋಗ್ಯ ನಿಯಂತ್ರಣ ಮಾಡಿಕೊಳ್ಳಬಹುದು.[/three_fourth_last]