Nellikaayi Leha

Advertisements

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಂವೃದ್ದವಾಗಿರುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಛಿಸುವುದು ಕೂಡ. ದಿನ ನಿತ್ಯ ಇದನ್ನು ಸೇವಿಸುವುದರಿಂದ ಆಯುರ್ವೇದದ ಪ್ರಕಾರ ಮೂರು ದೋಶಗಳನ್ನು ಹತೋಟಿಯಲ್ಲಿ ಇಡುತ್ತದೆ . ಕೂದಲಿನ ಆರೈಕೆ, ಮಲಬದ್ದತೆ , ಕಣ್ಣಿನ ರೋಗ , ಜೀರ್ಣಶಕ್ತಿ, ಅಲ್ಲದೆ ಯಾವುದೆ ರೋಗಗಳ ತಡೆಗಟ್ಟುವಿಕೆಗೆ ನೆಲ್ಲಿಕಾಯಿ ರಾಮಬಾಣ . ಯಾವ ರೀತಿಯಲ್ಲಿ ಬಳಸಿದರು ಇದರ ಔಷದಿಯಗುಣಗಳು ಕಡಿಮೆಯಾಗುವುದಿಲ್ಲ. ಇಲ್ಲಿದೆ ಸುಲಭವಾಗಿ ತಯಾರಿಸಬಹುದಾದ ನಲ್ಲಿಕಾಯಿ ಲೇಹ.

ನೆಲ್ಲಿಕಾಯಿ ಲೇಹ
Print Recipe
Servings Prep Time
1 cup 10 minutes
Cook Time
15 minutes
Servings Prep Time
1 cup 10 minutes
Cook Time
15 minutes
ನೆಲ್ಲಿಕಾಯಿ ಲೇಹ
Print Recipe
Servings Prep Time
1 cup 10 minutes
Cook Time
15 minutes
Servings Prep Time
1 cup 10 minutes
Cook Time
15 minutes
Ingredients
Instructions
  1. ಮೊದಲಿಗೆ ನೆಲ್ಲಿಕಾಯಿ ಚೆನ್ನಾಗಿ ತೊಳೆದು ಅದನ್ನು ಒಂದು ಬತ್ತೆಯಲ್ಲಿ ಒರೆಸಿ ತುರಿದು ಇಟ್ಟುಕೊಳ್ಳಿ .
  2. ತುರಿಗೆ ಅರ್ಧ ಕಪ್ ನೀರು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಒಲೆಯಮೇಲೆ ಮದ್ಯಮ ಉರಿಯಲ್ಲಿ ಇಟ್ಟು 5 ನಿಮಿಷ ಬೇಯಲು ಬಿಡಿ.
  3. ತುರಿ ಬೇಯುವಾಗ,ಬೇರೆ ಪಾತ್ರೆಯಲ್ಲಿ ಬೆಲ್ಲ ಮತ್ತು ಉಳಿದ ನೀರನ್ನು ಹಾಕಿ ಪಾಕ ಮಾಡಲು ಇಡಿ . ಬೆಲ್ಲ ಕರಗಿದ ಮೇಲೆ ಅದನ್ನು ಒಂದು ಒಳ್ಳೆ ಬಟ್ಟೆಯನ್ನು ಉಪಯೋಗಿಸಿ ಶೋಧಿಸಿ ಮತ್ತೆ ಆ ಪಾಕವನ್ನು ಒಲೆಯ ಮೇಲಿಟ್ಟು ಎಳೆ ಪಾಕ ಬರುವವರೆಗೆ ಬಿಡಬೇಕು.
  4. ಎಳೆಪಾಕ ಬಂದಮೇಲೆ ಈ ಪಾಕವನ್ನು ಬೇಯುತ್ತಿರುವ ನೆಲ್ಲಿಕಾಯಿಗೆ ಹಾಕಿ ಕಲಕಿ.
  5. ಪಾಕದಜೊತೆ ಸಕ್ಕರೆ ಹಾಕುವುದಾದಲ್ಲಿ ಶುಂಠಿ ಹುಡಿಯನ್ನು ಹಾಕಿ ಲೇಹ ಗಟ್ಟಿಯಾಗುವ ತನಕ ಕಲಕುತ್ತಿರಿ.
  6. ಲೇಹ ಗಟ್ಟಿಯಾದನಂತರ ಆರಲು ಬಿಡಿ.
  7. ಆರೋಗ್ಯಕರ ಮತ್ತು ರುಚಿಕರ ಲೇಹ ಸವಿಯಲು ಸಿದ್ದ.
Advertisements