ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಂವೃದ್ದವಾಗಿರುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಛಿಸುವುದು ಕೂಡ. ದಿನ ನಿತ್ಯ ಇದನ್ನು ಸೇವಿಸುವುದರಿಂದ ಆಯುರ್ವೇದದ ಪ್ರಕಾರ ಮೂರು ದೋಶಗಳನ್ನು ಹತೋಟಿಯಲ್ಲಿ ಇಡುತ್ತದೆ . ಕೂದಲಿನ ಆರೈಕೆ, ಮಲಬದ್ದತೆ , ಕಣ್ಣಿನ ರೋಗ , ಜೀರ್ಣಶಕ್ತಿ, ಅಲ್ಲದೆ ಯಾವುದೆ ರೋಗಗಳ ತಡೆಗಟ್ಟುವಿಕೆಗೆ ನೆಲ್ಲಿಕಾಯಿ ರಾಮಬಾಣ . ಯಾವ ರೀತಿಯಲ್ಲಿ ಬಳಸಿದರು ಇದರ ಔಷದಿಯಗುಣಗಳು ಕಡಿಮೆಯಾಗುವುದಿಲ್ಲ. ಇಲ್ಲಿದೆ ಸುಲಭವಾಗಿ ತಯಾರಿಸಬಹುದಾದ ನಲ್ಲಿಕಾಯಿ ಲೇಹ.
ನೆಲ್ಲಿಕಾಯಿ ಲೇಹ
Ingredients
- 5 or 1 cup Amla/nellikayi/Gooseberry ನೆಲ್ಲಿಕಾಯಿ ತುರಿ
- 1 cup ಬೆಲ್ಲ
- 1 cup ನೀರು ಅರ್ಧ ನೀರು ಬೆಲ್ಲದ ಪಾಕ ಮಾಡಲು ಮತ್ತು ಅರ್ಧ ನೆಲ್ಲಿಕಾಯಿ ಬೇಯಿಸುವುದಕ್ಕೆ
- 1 TBSP ಸಕ್ಕರೆ
- 1/4 tsp ಶುಂಠಿ ಪುಡೀ ಬೇಕಾದಲ್ಲಿ ಉಪಯೋಗಿಸಿ
Instructions
- ಮೊದಲಿಗೆ ನೆಲ್ಲಿಕಾಯಿ ಚೆನ್ನಾಗಿ ತೊಳೆದು ಅದನ್ನು ಒಂದು ಬತ್ತೆಯಲ್ಲಿ ಒರೆಸಿ ತುರಿದು ಇಟ್ಟುಕೊಳ್ಳಿ .
- ತುರಿಗೆ ಅರ್ಧ ಕಪ್ ನೀರು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಒಲೆಯಮೇಲೆ ಮದ್ಯಮ ಉರಿಯಲ್ಲಿ ಇಟ್ಟು 5 ನಿಮಿಷ ಬೇಯಲು ಬಿಡಿ.
- ತುರಿ ಬೇಯುವಾಗ,ಬೇರೆ ಪಾತ್ರೆಯಲ್ಲಿ ಬೆಲ್ಲ ಮತ್ತು ಉಳಿದ ನೀರನ್ನು ಹಾಕಿ ಪಾಕ ಮಾಡಲು ಇಡಿ . ಬೆಲ್ಲ ಕರಗಿದ ಮೇಲೆ ಅದನ್ನು ಒಂದು ಒಳ್ಳೆ ಬಟ್ಟೆಯನ್ನು ಉಪಯೋಗಿಸಿ ಶೋಧಿಸಿ ಮತ್ತೆ ಆ ಪಾಕವನ್ನು ಒಲೆಯ ಮೇಲಿಟ್ಟು ಎಳೆ ಪಾಕ ಬರುವವರೆಗೆ ಬಿಡಬೇಕು.
- ಎಳೆಪಾಕ ಬಂದಮೇಲೆ ಈ ಪಾಕವನ್ನು ಬೇಯುತ್ತಿರುವ ನೆಲ್ಲಿಕಾಯಿಗೆ ಹಾಕಿ ಕಲಕಿ.
- ಪಾಕದಜೊತೆ ಸಕ್ಕರೆ ಹಾಕುವುದಾದಲ್ಲಿ ಶುಂಠಿ ಹುಡಿಯನ್ನು ಹಾಕಿ ಲೇಹ ಗಟ್ಟಿಯಾಗುವ ತನಕ ಕಲಕುತ್ತಿರಿ.
- ಲೇಹ ಗಟ್ಟಿಯಾದನಂತರ ಆರಲು ಬಿಡಿ.
- ಆರೋಗ್ಯಕರ ಮತ್ತು ರುಚಿಕರ ಲೇಹ ಸವಿಯಲು ಸಿದ್ದ.