Featured Video Play Icon

ಟೊಮಟೋ ಸಾರು Tomato Rasam 2

ಸಾರು ಹಾಗೆ ಕುಡಿದರೂ ಸರಿಯೆ ಇಲ್ಲವೆ ಅನ್ನದ ಜೊತೆಯಲ್ಲಿ ತಿಂದರೂ ಸರಿಯೆ,ಬೇಳೆ ಹಾಕಿದರು ಉಂಟು ಇಲ್ಲದೆನೂ ಸೈ, ಇದರ ರುಚಿಯೇ ಅದ್ಭುತ . ಟೊಮಟೊ ಮತ್ತು ತಂಗಿನ ರಸದಿಂದ ತಯಾರಿಸುವ ಈ ಸಾರು ನೀವು ತಯಾರಿಸಿಯೆ ಇದರ ರುಚಿಯನ್ನು ಅನುಭವಿಸಬೇಕು .

ಟೊಮಟೋ ಸಾರು Tomato Rasam 2
Print Recipe
Servings Prep Time
2 to 4 ಜನರಿಗೆ 10 ನಿಮಿಷ
Cook Time
10 ನಿಮಿಷ
Servings Prep Time
2 to 4 ಜನರಿಗೆ 10 ನಿಮಿಷ
Cook Time
10 ನಿಮಿಷ
ಟೊಮಟೋ ಸಾರು Tomato Rasam 2
Print Recipe
Servings Prep Time
2 to 4 ಜನರಿಗೆ 10 ನಿಮಿಷ
Cook Time
10 ನಿಮಿಷ
Servings Prep Time
2 to 4 ಜನರಿಗೆ 10 ನಿಮಿಷ
Cook Time
10 ನಿಮಿಷ
Instructions
  1. ಟೊಮಟೊ ಸಾರಿಗೆ ಬೇಕಾಗುವ ಸಾಮಗ್ರಿಗಳು.
  2. ಒಂದು ಪಾತ್ರೆಗೆ ಟೊಮಟೊ, ಅರಿಶೀಣ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನ ಕಾಯಿ, , ಉಪ್ಪು ಹಾಕಿ, 2ಕಪ್ ನೀರನ್ನೂ ಹಾಕಿ ಒಲೆಯ ಮೇಲೆ ಕುದಿಯಲು ಇಡಿ. ಟೊಮಟೊ ಬೆಂದನಂತರ ಉರಿಯಾರಿಸಿ ಆರಲು ಬಿಡಿ.
  3. ಆರಿದ ನಂತರ ಟೊಮಟೊ ಸಿಪ್ಪೆಯನ್ನು ತೆಗೆದು ಅದನ್ನೂ ಉಳಿದ ಪದಾರ್ಥಗಳೊಡನೆ ಸಣ್ಣಗೆ ರುಬ್ಬಿಕೊಳ್ಳಿ.
  4. ಅರ್ಧ ಕಪ್ ನೀರನ್ನು ಬಿಸಿಮಾಡಿ ಕಾಯಿತುರಿಗೆ ಹಾಕಿ, ಅದರಿಂದ ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ.
  5. ತೆಂಗಿನ ಹಾಲು ಈಗ ತಯಾರು.
  6. ನುರಿದ ಟೊಮಟೊ ಮಿಶ್ರಣಕ್ಕೆ ಸಾರಿನ ಪುಡಿ ಮತ್ತು ಬೇಕಾದಷ್ಟು ನೀರನ್ನು ಹಾಕಿ 4 ರಿಂದ 5 ನಿಮಿಷ ಕುದಿಸಿ.
  7. ೫ ನಿಮಿಷದನಂತರ ಇದಕ್ಕೆ ತಯಾರಿಸಿಟ್ಟ ತೆಂಗಿನ ಹಾಲನ್ನು ಹಾಕಿ ಒಂದು ಕುದಿ ಕುದಿಸಿರಿ. ನಂತರ ಒಲೆ ಆರಿಸಿ ನಿಂಬೆ ಹಣ್ಣಿನ ರಸವನ್ನು ಹಿಂಡಿದರೆ ಸಾರು ತಯಾರು. ಇದಕ್ಕೆ ಕೊನೆಯಲ್ಲಿ ಒಗ್ಗರಣೆ.
ಒಗ್ಗರಣೆ
  1. ಒಗ್ಗರಣೆ ಸೌಟಿನಲ್ಲಿ 1/2 ಚಮಚ ತುಪ್ಪವನ್ನು ಹಾಕಿ ಕಾಯಲು ಇಡಿ. ತುಪ್ಪ ಕಾದಮೇಲೆ ಅದಕ್ಕೆ ಇಂಗು, ಸಾಸಿವೆ ಹಾಕಿ, ಸಾಸಿವೆ ಚಟಗುಟ್ಟಿದ ಮೇಲೆ ಅದಕ್ಕೆ ಜೀರಿಗೆ ಹಾಕಿ ಒಲೆ ಆರಿಸಿ. ಈ ಒಗ್ಗರಣೆಯನ್ನು ಸಾರಿಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಟೊಮಟೊ ಸಾರು ಕುಡಿಯಲು ಇಲ್ಲವೆ ಅನ್ನದ ಜೊತೆ ಸವಿಯಲು ಸಿದ್ಧ .