ಉಪ್ಪಿಟ್ಟು ನಮ್ಮ ದಿನ ನಿತ್ಯದ ಉಪಹಾರಗಳಲ್ಲಿ ಒಂದು. ಸುಲಭವಾಗಿ ಮಾಡುವಂತಹ ಈ ಉಪ್ಪಿಟ್ಟು ಸರಳವಾಗಿ ಒಗ್ಗರಣೆ ಹಾಕಿ ಮಾಡುವುದರಿಂದ ಹಿಡಿದು, ತರಕಾರಿ ಹಾಕಿ ಅದಕ್ಕೆ ಮಸಾಲೆಗಳನ್ನು ಹಾಕಿ ಬೇಕಾದರೂ ಮಾಡಬಹುದು. ಈರುಳ್ಳಿ ಬದಲಿಗೆ ಎಲೆ ಕೋಸನ್ನು ಹಾಕಿ ನೀವು ಉಪ್ಪಿಟ್ಟನ್ನು ಮಾಡಿದರೆ ಅದರ ರುಚಿಯೇ ಬೇರೆ.
Cabbage Uppittu ಎಲೆ ಕೋಸಿನ ಉಪ್ಪಿಟ್ಟು
Ingredients
- 1.5 ರಿಂದ 2 ಕಪ್ ಸಣ್ಣಗೆ ಹೆಚ್ಚಿದ ಎಲೆ ಕೋಸು
- 1 ಕಪ್ ಮೀಡಿಯಮ್ ರವೆ ಅದನ್ನು ಎಣ್ಣೆಹಾಕದೆ ಹುರಿದಿಟ್ಟುಕೊಳ್ಳಿ
- 1¼ tsp ಉಪ್ಪು
- 1/4 ರಿಂದ 1/2 ಕಪ್ ಕಾಯಿತುರಿ
- 2.5 ಕಪ್ ನೀರು
- 3 TBSP ಎಣ್ಣೆ
- 1 tsp ಸಾಸಿವೆ
- 1 TBSP ಉದ್ದಿನ ಬೇಳೆ
- 1/2 TBSP ಕಡ್ಲೆ ಬೇಳೆ
- 5 ರಿಂದ 8 ಹಸಿರುಮೆಣಸಿನ ಕಾಯಿ ಹೆಚ್ಚು ಕಡಿಮೆ ನಿಮ್ಮ ಖಾರದ ಅಗತ್ಯದ ಮೇಲೆ
- 10 ರಿಂದ 15 ಕರಿಬೇವಿನ ಸೊಪ್ಪು
- ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/8 tsp ಅರಿಶಿಣ
Instructions
- ರವೆಯನ್ನು ಮೀಡಿಯಮ್ ಉರಿಯಲ್ಲಿ ಹಸಿವಾಸನೆ ಹೊಗುವವರೆಗೆ ಇಲ್ಲವೆ ಹೊಂಬಣ್ಣ ಬರುವಷ್ಟು ಎಣ್ಣೆ ಹಾಕದೆ ಹುರಿದಿಟ್ಟುಕೊಳ್ಳಿ.
- ಕೋಸನ್ನು ಹೆಚ್ಚಿ ತೊಳೆದಿಟ್ಟುಕೊಳ್ಳಿ ಮತ್ತು ನೀರನ್ನು ಕುದಿಯಲು ಇಡಿ.
- ಈಗ ಒಂದು ತಪ್ಪ ತಳದ ಪಾತ್ರೆಯಲ್ಲಿ ಎಣ್ನೆಯನ್ನು ಹಾಕಿ ಮೀಡಿಯಮ್ ಉರಿಯಲ್ಲಿ ಕಾಯಲು ಇಡಿ. ಎಣ್ಣೆ ಕಾದ ಮೇಲೆ ಅದಕ್ಕೆ ಸಾಸಿವೆ, ಸಾಸಿವೆ ಚಟಗುಟ್ಟಿದ ಮೇಲೆ ಉದ್ದಿನ ಬೇಳೆ ಹಾಗು ಕಡಲೆಬೇಳೆ ಯನ್ನು ಹಾಕಿ, ಅವು ಕೆಂಪಾಗುವಷ್ಟು ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ಮೆಣಸಿನಕಾಯನ್ನು ಹಾಕಿ ಅದು ಸ್ವಲ್ಪ ಬೆಳ್ಳಗಾಗುವಷ್ಟು ಹುರಿಯಿರಿ.
- ಇದಕ್ಕೆ ಹಚ್ಚಿಟ್ಟ ಕೋಸು, ಅರಿಶಿಣ, ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಕಲಸಿ 1 ರಿಂದ 2 ನಿಮಿಷ ಹುರಿಯಿರಿ.
- ಈಗ ಕುದಿಯುತ್ತಿರುವ ನೀರನ್ನು, ಕಾಯಿ ಹಾಗು ಉಪ್ಪನ್ನು ಹಾಕಿ.
- ಉರಿಯನ್ನು ಕಡಿಮೆ ಮಾಡಿ ನಿಧಾನವಾಗಿ ಹುರಿದಿಟ್ಟ ರವೆಯನ್ನು ಹಾಕಿ ಕಲಕುತ್ತಾ ಇರಿ . ರವೆ ಹಾಕಿ ಮಿಕ್ಸ್ ಮಾಡಿದ ಮೇಲೆ ಒಂದು ತಟ್ಟೆಯನ್ನು ಮುಚ್ಚಿ 5 ನಿಮಿಷ ಹಾಗೆ ಬೇಯಬೇಕು. ನಂತರ ಒಲೆಯನ್ನು ಆರಿಸಿ.
- ಮತ್ತೆ ಬೆಂದ ಉಪ್ಪಿಟ್ಟನ್ನು ಮಿಕ್ಸ್ ಮಾಡಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನೊಡನೆ ಅಲಂಕಾರ ಮಾಡಿದರೆ ರುಚಿಯಾದ ಕೋಸಿನ ಉಪ್ಪಿಟ್ಟು ತುಪ್ಪ ಅಥವ ಚಟ್ನಿ ಪುಡಿ ಇಲ್ಲವೆ ಉಪ್ಪಿನಕಾಯಿಯೊಡನೆ ಸವಿಯಲು ಸಿದ್ಧ .