Featured Video Play Icon

ಟೊಮಟೋ ಸಾರು Tomato Rasam 2

ಸಾರು ಹಾಗೆ ಕುಡಿದರೂ ಸರಿಯೆ ಇಲ್ಲವೆ ಅನ್ನದ ಜೊತೆಯಲ್ಲಿ ತಿಂದರೂ ಸರಿಯೆ,ಬೇಳೆ ಹಾಕಿದರು ಉಂಟು ಇಲ್ಲದೆನೂ ಸೈ, ಇದರ ರುಚಿಯೇ ಅದ್ಭುತ . ಟೊಮಟೊ ಮತ್ತು ತಂಗಿನ ರಸದಿಂದ ತಯಾರಿಸುವ ಈ ಸಾರು ನೀವು ತಯಾರಿಸಿಯೆ ಇದರ ರುಚಿಯನ್ನು ಅನುಭವಿಸಬೇಕು .

ಟೊಮಟೋ ಸಾರು Tomato Rasam 2

Prep Time 10 minutes
Cook Time 10 minutes
Total Time 20 minutes
Servings 2 ಜನರಿಗೆ

Ingredients
  

  • 4 to 5 ಮದ್ಯಮ ಗಾತ್ರದ ಟೊಮಾಟೊ ಹಣ್ಣು
  • 2/3 ಕಪ್ ಕಾಯಿ ತುರಿ
  • 1 ಹಸಿರು ಮೆಣಸಿನ ಕಾಯಿ
  • 1/2 ಹೋಳು ನಿಂಬೆಹಣ್ಣಿನ ರಸ
  • 1/2 TBSP ಬೆಲ್ಲ
  • 1 tsp ಉಪ್ಪು
  • 1/2 tsp ಅರಿಶಿಣ
  • 1 TBSP ಸಾರಿನ ಪುಡಿ
  • ಸುಮಾರಾಗಿ 4 ಕಪ್ ನೀರು
  • 10 to 15 ಕರಿಬೇವಿನ ಎಲೆ
  • ಅಲಂಕಾರಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ

  • 2 tsp ತುಪ್ಪ
  • pinch ಇಂಗು
  • 1/2 tsp ಜೀರಿಗೆ
  • 1/2 tsp ಸಾಸಿವೆ

Instructions
 

  • ಟೊಮಟೊ ಸಾರಿಗೆ ಬೇಕಾಗುವ ಸಾಮಗ್ರಿಗಳು.
  • ಒಂದು ಪಾತ್ರೆಗೆ ಟೊಮಟೊ, ಅರಿಶೀಣ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನ ಕಾಯಿ, , ಉಪ್ಪು ಹಾಕಿ, 2ಕಪ್ ನೀರನ್ನೂ ಹಾಕಿ ಒಲೆಯ ಮೇಲೆ ಕುದಿಯಲು ಇಡಿ. ಟೊಮಟೊ ಬೆಂದನಂತರ ಉರಿಯಾರಿಸಿ ಆರಲು ಬಿಡಿ.
  • ಆರಿದ ನಂತರ ಟೊಮಟೊ ಸಿಪ್ಪೆಯನ್ನು ತೆಗೆದು ಅದನ್ನೂ ಉಳಿದ ಪದಾರ್ಥಗಳೊಡನೆ ಸಣ್ಣಗೆ ರುಬ್ಬಿಕೊಳ್ಳಿ.
  • ಅರ್ಧ ಕಪ್ ನೀರನ್ನು ಬಿಸಿಮಾಡಿ ಕಾಯಿತುರಿಗೆ ಹಾಕಿ, ಅದರಿಂದ ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ.
  • ತೆಂಗಿನ ಹಾಲು ಈಗ ತಯಾರು.
  • ನುರಿದ ಟೊಮಟೊ ಮಿಶ್ರಣಕ್ಕೆ ಸಾರಿನ ಪುಡಿ ಮತ್ತು ಬೇಕಾದಷ್ಟು ನೀರನ್ನು ಹಾಕಿ 4 ರಿಂದ 5 ನಿಮಿಷ ಕುದಿಸಿ.
  • ೫ ನಿಮಿಷದನಂತರ ಇದಕ್ಕೆ ತಯಾರಿಸಿಟ್ಟ ತೆಂಗಿನ ಹಾಲನ್ನು ಹಾಕಿ ಒಂದು ಕುದಿ ಕುದಿಸಿರಿ. ನಂತರ ಒಲೆ ಆರಿಸಿ ನಿಂಬೆ ಹಣ್ಣಿನ ರಸವನ್ನು ಹಿಂಡಿದರೆ ಸಾರು ತಯಾರು. ಇದಕ್ಕೆ ಕೊನೆಯಲ್ಲಿ ಒಗ್ಗರಣೆ.

ಒಗ್ಗರಣೆ

  • ಒಗ್ಗರಣೆ ಸೌಟಿನಲ್ಲಿ 1/2 ಚಮಚ ತುಪ್ಪವನ್ನು ಹಾಕಿ ಕಾಯಲು ಇಡಿ. ತುಪ್ಪ ಕಾದಮೇಲೆ ಅದಕ್ಕೆ ಇಂಗು, ಸಾಸಿವೆ ಹಾಕಿ, ಸಾಸಿವೆ ಚಟಗುಟ್ಟಿದ ಮೇಲೆ ಅದಕ್ಕೆ ಜೀರಿಗೆ ಹಾಕಿ ಒಲೆ ಆರಿಸಿ. ಈ ಒಗ್ಗರಣೆಯನ್ನು ಸಾರಿಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಟೊಮಟೊ ಸಾರು ಕುಡಿಯಲು ಇಲ್ಲವೆ ಅನ್ನದ ಜೊತೆ ಸವಿಯಲು ಸಿದ್ಧ .
Keyword Rasam, Side Dishes