Mixed vegetable Sambar ಮಿಶ್ರ ತರಕಾರಿ ಹುಳಿ

ನಮ್ಮ ದಿನ ನಿತ್ಯದ ಊಟದಲ್ಲಿ ಹುಳಿ ಅಥವಾ ಸಾಂಬಾರ್ ಮುಖ್ಯವಾದ ಅಡುಗೆ. ದಿವಸವೂ ಒಂದೇ ತರಹ ತಿನ್ನಲು ಬೇಜಾರು. ಅದಕ್ಕಾಗಿ ವಿಧ ವಿಧವಾದ ರೀತಿಯಲ್ಲಿ, ಬೇರೆ ಬೇರೆ ತರಕಾರಿಗಳೊಡನೆ ತಯಾರಿಸುವ ಈ ಹುಳಿ ಇಲ್ಲವೆ ಸಾಂಬಾರ್ ಎವರ್ ಗ್ರೀನ್.

Mixed vegetable Sambar ಮಿಶ್ರ ತರಕಾರಿ ಹುಳಿ
Print Recipe
Servings Prep Time
4 ಜನರಿಗೆ 10 ನಿಮಿಷ
Cook Time
15 ನಿಮಿಷ
Servings Prep Time
4 ಜನರಿಗೆ 10 ನಿಮಿಷ
Cook Time
15 ನಿಮಿಷ
Mixed vegetable Sambar ಮಿಶ್ರ ತರಕಾರಿ ಹುಳಿ
Print Recipe
Servings Prep Time
4 ಜನರಿಗೆ 10 ನಿಮಿಷ
Cook Time
15 ನಿಮಿಷ
Servings Prep Time
4 ಜನರಿಗೆ 10 ನಿಮಿಷ
Cook Time
15 ನಿಮಿಷ
Ingredients
ಮಸಾಲೆ ತಿರುವಲು/ರುಬ್ಬಲು
Instructions
  1. ಮೊದಲು ಬೇಳೆ ಮತ್ತು ತರಕಾರಿಗಳನ್ನು ಚೆನ್ನಗಿ ತೊಳೆದಿಟ್ಟುಕೊಳ್ಳಿ.
  2. ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಯಲು ಇಡಬೇಕು .
  3. ಹುರುಳಿಕಾಯಿಯನ್ನು ಒಂದು ಇಂಚು ಉದ್ದಕ್ಕೆ ಮುರಿದಿಟ್ಟು ಕೊಂಡು, ಕ್ಯಾರೆಟ್ಟಿನ ಮತ್ತು ನವಿಲು ಕೋಸಿನ ಸಿಪ್ಪೆಯನ್ನು ತೆಗೆದು ಅದನ್ನು ಚಿಕ್ಕ ಹೊಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು.
  4. ತೊಳೆದಿಟ್ಟ ಬೇಳೆಗೆ 2 ಕಪ್ ನೀರು ,ಅರಿಶಿಣ, 1/4 ಚಮಚ ಎಣ್ಣೆ ಹಾಗು ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ 2 ಕೂಗು ಬರುವಷ್ಟು ಬಿಡಿ.
  5. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಬೀಜ,ಮಂತ್ಯ ಮತ್ತು ಮೆಣಸಿನ ಕಾಯಿಯನ್ನು ಹಾಕಿ ಮೆಂತ್ಯ ಕೆಂಪಗಾಗುವಷ್ಟು ಹುರಿದಿಟ್ಟುಕೊಳ್ಳಿ .
  6. ಹುರಿದ ಮಸಾಲೆಯನ್ನು ಕಾಯಿ ಮತ್ತು ಹುಣಸೆ ಹಣ್ಣಿನೊಡನೆ ಸುಮಾರಾಗಿ ಸಣ್ನಗೆ ರುಬ್ಬಿಕೊಳ್ಳಿ.
  7. ಕುಕ್ಕರ್ ಆರಿದ ಮೇಲೆ ಬೆಂದ ಬೇಳೆ ಮತ್ತು ತರಕಾರಿಯನ್ನು ಒಂದು ದೊಡ್ಡ ಪಾತ್ರೆಗೆ ತೆಗೆದುಕೊಳ್ಳಿ .
  8. ಅದಕ್ಕೆ ತಿರುವಿಕೊಂಡ ಮಿಶ್ರಣ, ಉಪ್ಪು ಮತ್ತು ನೀರನ್ನು ಹಾಕಿ ಕಲಸಿ ಸುಮಾರಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು .
  9. ಬೇಕಾದಲ್ಲಿ ಕರಿಬೇವಿನ ಸೊಪ್ಪನ್ನೂ ಹಾಕಬಹುದು. ಹುಳಿಯ ಮೇಲುಗಡೆ ನೊರೆ ನೊರೆಯಾಗಿ ಬಂದಾಗ ಉರಿಯನ್ನು ಆರಿಸಿ. ಹುಳಿ ತಯಾರು .
ಒಗ್ಗರಣೆ
  1. 2 ಟಿ ಚಮಚ ಎಣ್ನೆಯನ್ನು ಒಗ್ಗರಣೆ ಸೌಟಿನಲ್ಲಿ ಒಲೆಯ ಮೇಲಿಟ್ಟು ಅದಕ್ಕೆ ಇಂಗು ಸಾಸಿವೆ ಹಾಕಿ , ಸಾಸಿವೆ ಚಟಗುಟ್ಟಿದ ಮೇಲೆ ಮೆಣಸಿನಕಾಯಿಯನ್ನು ಮುರಿದು ಹಾಕಿ ಉರಿಯನ್ನು ಆರಿಸಿ .
  2. ಈ ಒಗ್ಗರಣೆಯನ್ನು ತಯಾರಿಸಿರುವ ಹುಳಿಗೆ ಹಾಕಿದರೆ ರುಚಿಕರವಾದ ಮಿಶ್ರ ತರಕಾರಿ ಹುಳಿ ಸವಿಯಲು ಸಿದ್ಧ . ಅನ್ನ ಹಾಗು ರಾಗಿ ಮುದ್ದೆಯೊಡನೆ ಬಲು ರುಚಿ .
Recipe Notes

For recipe in English click here:      Mixed Vegetable Sambar