ಶುಂಠಿ ತಂಬುಳಿ ginger flavored yogurt
ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು. ಈ ತಂಬುಳಿ, ಶುಂಠಿಯನ್ನು ಉಪಯೋಗಿಸಿ ಮಾಡಿರುವ ಶುಂಠಿ ತಂಬುಳಿ .
ಶುಂಠಿ ತಂಬುಳಿ ginger flavored yogurt
ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು. ಈ ತಂಬುಳಿ, ಶುಂಠಿಯನ್ನು ಉಪಯೋಗಿಸಿ ಮಾಡಿರುವ ಶುಂಠಿ ತಂಬುಳಿ .
Ingredients
- 2 TBSP ಸಣ್ಣದಾಗಿ ಹೆಚ್ಚಿದ ಶುಂಠಿ or 2 inch long ginger cut into small pieces
- 1/2 ಕಪ್ ಕಾಯಿತುರಿ
- 1/2 ಕಪ್ ಮೊಸರು
- 1 tsp ತುಪ್ಪ
- 10 ರಿಂದ 15 ಕರಿಬೇವಿನ ಸೊಪ್ಪು
- 1 tsp ಜೀರಿಗೆ
- 1/2 tsp ಕಾಳು ಮೆಣಸು
- 1/2 tsp ಉಪ್ಪು
ಒಗ್ಗರಣೆಗೆ:
- 1 tsp ತುಪ್ಪ
- 1/2 tsp ಜೀರಿಗೆ
- 1/4 tsp ಸಾಸಿವೆ
Instructions
- ಮೊದಲಿಗೆ ತಂಬುಳಿಗೆ ಬೇಕಾದ ಪದಾರ್ಥಗಳನ್ನು ತೆಗೆದಿಟ್ಟುಕೊಳ್ಳಿ.
- ತುಪ್ಪವನ್ನು ಒಂದ್ ಬಾಣಲೆ ಇಲ್ಲವೆ ದಪ್ಪ ತಳದ ಪಾತ್ರೆಯಲ್ಲಿ ಬಿಸಿಗಿಡಿ. ಅದಕ್ಕೆ ಜೀರಿಗೆ ಮತ್ತು ಮೆಣಸನ್ನು ಹಾಕಿ ಕಲಕಿ.
- ಈಗ ಹೆಚ್ಚಿಟ್ಟ ಶುಂಠಿ ಚೂರುಗಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ 2 ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಶುಂಠಿಯ ಘಮ ಬರಬೇಕು.
- ಹುರಿದ ಶುಂಠಿಯ ಘಮ ಬಂದಮೇಲೆ ಒಲೆ ಆರಿಸಿ ಇದಕ್ಕೆ ಕಾಯಿ ಹಾಕಿ ಆರಲು ಬಿಡಿ .
- ಆರಿದ ಈ ಮಿಶ್ರಣವನ್ನು ಮಿಕ್ಸರಿಗೆ ಹಾಕಿ ಜೊತೆಗೆ ಉಪ್ಪು ಹಾಗು ಮೊಸರನ್ನೂ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ .
- ರುಬ್ಬಿದ ಈ ತಂಬುಳಿಯನ್ನು ಒಂದು ಪಾತ್ರೆಗೆ ತೆಗೆದು ಅದಕ್ಕೆ ಒಗ್ಗರಣೆ ಹಾಕುವುದು.
ಒಗ್ಗರಣೆಗೆ:
- ಒಗ್ಗರಣೆ ಸೌಟಿನಲ್ಲಿ 1/2 ಚಮಚ ತುಪ್ಪವನ್ನು ಹಾಕಿ ಅದನ್ನು ಬಿಸಿಗೆ ಇಡಿ. ಬಿಸಿಯಾದ ನಂತರ ಸಾಸಿವೆ ,ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ಜೀರಿಗೆ ಆದನಂತರ ಈ ಒಗ್ಗರಣೆಯನ್ನು ತಂಬುಳಿಗೆ ಹಾಕಿ ಕಲಕಿದರೆ ರುಚಿಯಾದ, ಆರೋಗ್ಯಕರ ಶುಂಠಿ ತಂಬುಳಿ ಅನ್ನದ ಜೊತೆ ಸವಿಯಲು ಸಿದ್ಧ.
Notes
For recipe in English click here : Ginger tambuLi