Featured Video Play Icon

ಶುಂಠಿ ತಂಬುಳಿ ginger flavored yogurt

ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು. ಈ ತಂಬುಳಿ, ಶುಂಠಿಯನ್ನು ಉಪಯೋಗಿಸಿ ಮಾಡಿರುವ ಶುಂಠಿ ತಂಬುಳಿ .

ಶುಂಠಿ ತಂಬುಳಿ ginger flavored yogurt

ತಂಬುಳಿಗಳು ನಮ್ಮ ದಿನ ನಿತ್ಯದ ಅಡುಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ತಿಂದರೆ ಆರೋಗ್ಯದ ಜೊತೆಗೆ ಪಚನಕಾರಿನೂ ಹೌದು. ಮನೆಯಲ್ಲೆ ಇರುವ ಸಾಮಗ್ರಿಗಳೊಂದಿಗೆ ತಯಾರಿಸಬಹುದಾದ ಈ ತಂಬುಳಿಗಳು ಮಲೆನಾಡಿನ ಸವಿ ರುಚಿಗಳು. ಈ ತಂಬುಳಿ, ಶುಂಠಿಯನ್ನು ಉಪಯೋಗಿಸಿ ಮಾಡಿರುವ ಶುಂಠಿ ತಂಬುಳಿ .
Prep Time 5 minutes
Cook Time 8 minutes
Total Time 13 minutes
Servings 2 ಜನರಿಗೆ

Ingredients
  

  • 2 TBSP ಸಣ್ಣದಾಗಿ ಹೆಚ್ಚಿದ ಶುಂಠಿ or 2 inch long ginger cut into small pieces
  • 1/2 ಕಪ್ ಕಾಯಿತುರಿ
  • 1/2 ಕಪ್ ಮೊಸರು
  • 1 tsp ತುಪ್ಪ
  • 10 ರಿಂದ 15 ಕರಿಬೇವಿನ ಸೊಪ್ಪು
  • 1 tsp ಜೀರಿಗೆ
  • 1/2 tsp ಕಾಳು ಮೆಣಸು
  • 1/2 tsp ಉಪ್ಪು

ಒಗ್ಗರಣೆಗೆ:

  • 1 tsp ತುಪ್ಪ
  • 1/2 tsp ಜೀರಿಗೆ
  • 1/4 tsp ಸಾಸಿವೆ

Instructions
 

  • ಮೊದಲಿಗೆ ತಂಬುಳಿಗೆ ಬೇಕಾದ ಪದಾರ್ಥಗಳನ್ನು ತೆಗೆದಿಟ್ಟುಕೊಳ್ಳಿ.
  • ತುಪ್ಪವನ್ನು ಒಂದ್ ಬಾಣಲೆ ಇಲ್ಲವೆ ದಪ್ಪ ತಳದ ಪಾತ್ರೆಯಲ್ಲಿ ಬಿಸಿಗಿಡಿ. ಅದಕ್ಕೆ ಜೀರಿಗೆ ಮತ್ತು ಮೆಣಸನ್ನು ಹಾಕಿ ಕಲಕಿ.
  • ಈಗ ಹೆಚ್ಚಿಟ್ಟ ಶುಂಠಿ ಚೂರುಗಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ 2 ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಶುಂಠಿಯ ಘಮ ಬರಬೇಕು.
  • ಹುರಿದ ಶುಂಠಿಯ ಘಮ ಬಂದಮೇಲೆ ಒಲೆ ಆರಿಸಿ ಇದಕ್ಕೆ ಕಾಯಿ ಹಾಕಿ ಆರಲು ಬಿಡಿ .
  • ಆರಿದ ಈ ಮಿಶ್ರಣವನ್ನು ಮಿಕ್ಸರಿಗೆ ಹಾಕಿ ಜೊತೆಗೆ ಉಪ್ಪು ಹಾಗು ಮೊಸರನ್ನೂ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ .
  • ರುಬ್ಬಿದ ಈ ತಂಬುಳಿಯನ್ನು ಒಂದು ಪಾತ್ರೆಗೆ ತೆಗೆದು ಅದಕ್ಕೆ ಒಗ್ಗರಣೆ ಹಾಕುವುದು.

ಒಗ್ಗರಣೆಗೆ:

  • ಒಗ್ಗರಣೆ ಸೌಟಿನಲ್ಲಿ 1/2 ಚಮಚ ತುಪ್ಪವನ್ನು ಹಾಕಿ ಅದನ್ನು ಬಿಸಿಗೆ ಇಡಿ. ಬಿಸಿಯಾದ ನಂತರ ಸಾಸಿವೆ ,ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ಜೀರಿಗೆ ಆದನಂತರ ಈ ಒಗ್ಗರಣೆಯನ್ನು ತಂಬುಳಿಗೆ ಹಾಕಿ ಕಲಕಿದರೆ ರುಚಿಯಾದ, ಆರೋಗ್ಯಕರ ಶುಂಠಿ ತಂಬುಳಿ ಅನ್ನದ ಜೊತೆ ಸವಿಯಲು ಸಿದ್ಧ.

Notes

For recipe in English click here :  Ginger tambuLi 
Keyword Side Dishes