ಮಲೆನಾಡು ಅಡುಗೆಗಳು ಆರೋಗ್ಯಕರ ಮತ್ತು ರುಚಿಕರ. ತರತರಾವರಿ ಕಡುಬುಗಳಿಗೆ ಪ್ರಸಿದ್ಧ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ಅಕ್ಕಿ ತರಿಯನ್ನು ಉಪಯೋಗಿಸಿ ಕಡುಬು ಮಾಡುವುದು. ಅಕ್ಕಿ ತರಿಯನ್ನು ಮನೆಯಲ್ಲೆ ಮಾಡಬಹುದು, ಇಲ್ಲವೆ ಅಂಗಡಿಯಲ್ಲಿ ಸಿಗುವ ತರಿಯನ್ನೂ ಕೂಡ ಉಪಯೊಗಿಸಬಹುದು.
Undlige Recipe ಉಂಡ್ಲಿಗೆ,ಉಂಡಿ, ಅಕ್ಕಿತರಿ ಕಡುಬು
ಮಲೆನಾಡು ಅಡುಗೆಗಳು ಆರೋಗ್ಯಕರ ಮತ್ತು ರುಚಿಕರ. ತರತರಾವರಿ ಕಡುಬುಗಳಿಗೆ ಪ್ರಸಿದ್ಧ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ಅಕ್ಕಿ ತರಿಯನ್ನು ಉಪಯೋಗಿಸಿ ಕಡುಬು ಮಾಡುವುದು. ಅಕ್ಕಿ ತರಿಯನ್ನು ಮನೆಯಲ್ಲೆ ಮಾಡಬಹುದು, ಇಲ್ಲವೆ ಅಂಗಡಿಯಲ್ಲಿ ಸಿಗುವ ತರಿಯನ್ನೂ ಕೂಡ ಉಪಯೊಗಿಸಬಹುದು.
Undlige recipe with step by step pictures - made with rice and it is steamed 🙂
When it comes to breakfast it is always a question, what to prepare? Everyday we will look for something different. Here is one of the healthy and delicious breakfast from malenaadu region of Karnataka - undlige/undi/akkitari kadubu/pundi gatti.
Ingredients
- 2 cup ಅಕ್ಕಿ ತರಿ akkitari/rice rave
- 6 to 8 ಹಸಿರು ಮೆಣಸಿನ ಕಾಯಿ green chillies
- ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು chopped coriander leaves
- ಸ್ವಲ್ಪ ಕರಿಬೇವಿನ ಸೊಪ್ಪು curry leaves
- 1/2 cup ತೆಂಗಿನ ಕಾಯಿ ತುರಿ coconut
- 1 TBSP ಉಪ್ಪು salt
- 1/2 tsp ಜೀರಿಗೆ geerige/cumin seeds
- 6 cup ನೀರು water
- 1 TBSP ಎಣ್ಣೆ oil
Instructions
- ಅಕ್ಕಿತರಿ ಮನೆಯಲ್ಲೆ ಮಾಡುವ ವಿಧಾನ ಮೇಲಿನ ವೀಡಿಯೋನಲ್ಲಿ ಇದೆ .
- Heat the pan and dry roast the rave until it becomes little hot. Transfer it to plate. ರವೆಯನ್ನು ಬಿಸಿಯಾಗುವಷ್ಟು ಹುರಿಯಿರಿ.
- Keep the same pan back on stove, add 1TBSP oil. Now pour the water. ( no need to heat the oil) Allow it to boil. ದೊಡ್ಡ ಪಾತ್ರೆಗೆ ಎಣ್ನೆಯನ್ನು ಜೊತೆಗೆ ನೀರನ್ನು ಹಾಕಿ ಕುದಿಯಲು ಇಡಿ. ಎಣ್ಣೆ ಕಾಯುವ ಅಗತ್ಯ ಇಲ್ಲ.
- Grind coconut along with green chillies to coarse consistency. ಮಿಕ್ಸರಿನಲ್ಲಿ ಮೆಣಸಿನಕಾಯಿ ಹಾಗು ಕಾಯಿ ಹಾಕಿ ತರಿಯಾಗಿ ರುಬ್ಬಿ.
- Once the water starts to boil add the grind masala, salt, cumin seeds and also chopped coriander leaves and curry leaves. ಕುದಿಯುತ್ತಿರುವ ನೀರಿಗೆ ಉಪ್ಪು, ಜೀರಿಗೆ, ರುಬ್ಬಿಟ್ಟ ಮಸಾಲೆ ಹಾಗು ಹೆಚ್ಚಿಟ್ಟ ಕೊತ್ತಂಬರಿ, ಕರಿಬೇವನ್ನು ಹಾಕಿ ಕಲಕಿ .
- Reduce the heat to medium low, add the rave slowly mixing continuously. ಉರಿಯನ್ನು ಕಮ್ಮಿ ಮಾಡಿ ನಿಧಾನವಾಗಿ ಹುರಿದಿಟ್ಟ ರವೆಯನ್ನು ಹಾಕಿ ಕಲಸುತ್ತಿರಿ.
- Keep mixing it until the mix becomes thick like upma/uppittu. ಉಪ್ಪಿಟ್ಟಿನ ಹದ ಬಂದಮೇಲೆ ಒಲೆಯಾರಿಸಿ ಸ್ವಲ್ಪ ಆರಲು ಬಿಡಿ.
- Now grease the pan you want to steam the undlige. ಬೇಯಿಸುವ ಕುಕ್ಕರಿನ ಪಾತ್ರೆಗೆ ಎಣ್ಣೆ ಸವರಿ ಕಡುಬು ಮಾಡಿ ಇಡಲು ತಯಾರಿ ಮಾಡಿಟ್ಟುಕೊಳ್ಳಿ .
- Make the balls and press to flatten it. If the mix is hot, dip your palm in cold water and make the balls as shown. ಸ್ವಲ್ಪ ಬಿಸಿಯಾಗಿರುವಾಗಲೆ ಕೈಯನ್ನು ನೀರಿನಲ್ಲಿ ಅದ್ದಿಕೊಂಡು ಉಂಡೆಗಳನ್ನು ಮಾಡಿ.
- Place all the prepared unde in the greased cooker container like this. ಮಾಡುವ ಎಲ್ಲ ಉಂಡೆಗಳನ್ನು ಎಣ್ಣೆ ಸವರಿದ ಪಾತ್ರೆಯಲ್ಲಿ ಈ ರೀತಿಯಾಗಿ ಚಿತ್ರದಲ್ಲಿ ತೋರಿಸಿರುವಂತೆ ಇಡಿ.
- Now steam cook this in the pressure cooker (don't put the weight , place the cup instead) on medium high heat for 20 to 25 minutes. Then turn off the heat and wait for 2 to 4 minutes before you open the lid. ಕುಕ್ಕರಿನ ತಳಕ್ಕೆ ಸಾಕಷ್ಟು ನೀರನ್ನು ಹಾಕಿ ಮಾಡಿತ್ತ ಉಂಡೆಗಳನ್ನು ಹಬೆಯಲ್ಲಿ /ಆವಿಯಲ್ಲಿ ೨೦ ರಿಂದ ೨೫ ನಿಮಿಷ ಬೇಯಿಸಿ.
- Now the healthy undlige/kadubu/unde is ready to eat. Enjoy this hot undlige with ghee or coconut chutney or onion sambar. ಈಗ ತಯಾರಾಗಿದೆ ಬಿಸಿಬಿಸಿಯಾದ ಉಂಡ್ಲಿಗೆ/ಕಡುಬು. ಚಟ್ನಿ ಜೊತೆಗೆ, ಈರುಳ್ಳಿ ಹುಳಿಯೊಂದಿಗೆ ಬಹು ರುಚಿ .