Featured Video Play Icon

ಕಾಯಿ ಈರುಳ್ಳಿ ಚಟ್ನಿ, Coconut Onion Chutney Recipe

ನಮ್ಮ ಅಮ್ಮ ಅಡುಗೆಯಲ್ಲಿ ಈರುಳ್ಳಿ ಬಳಸೋದೆ ಬಹಳ ಅಪರೂಪ. ವರ್ಷದಲ್ಲಿ ಒಂದು ನಾಲ್ಕು ದಿನ ಉಪಯೋಗಿಸಿದರೆ ಹೆಚ್ಚು. ಈ ಚಟ್ನಿಗೆ ಅಮ್ಮ ಮಾತ್ರ ಈರುಳ್ಳಿ ಹಾಕಿ ಮಾಡೋದು. ದೋಸೆ ಜೊತೆ ಸವಿದರೆ ಅಬ್ಬಾ ಏನು ರುಚಿ. ಮಾಡಲು ಸುಲಭ ಆದ್ರೆ ರುಚಿ ಮಾತ್ರ ಅದ್ಭುತ.

ಕಾಯಿ ಈರುಳ್ಳಿ ಚಟ್ನಿ Coconut Onion Chutney Recipe

Prep Time 5 minutes
Cook Time 5 minutes
Total Time 10 minutes
Servings 3 people

Ingredients
  

  • 1 ಕಪ್ ಕಾಯಿ ತುರಿ
  • 1/4 ಸಣ್ಣ ಈರುಳ್ಳಿ ಅಥವಾ ಹೆಚ್ಚಿದ ಈರುಳ್ಳಿ 3 TBSP
  • 3 ರಿಂದ 4 ಹಸಿರುಮೆಣಸಿನ ಕಾಯಿ
  • 1/4 tsp ಚಮಚಕ್ಕಿಂತ ಸ್ವಲ್ಪ ಜಾಸ್ತಿ ಉಪ್ಪು
  • ಸಣ್ಣ ಗೋಲಿ ಗಾತ್ರ ಹುಣಸೆಹಣ್ಣು ನೀರಲ್ಲಿ ನೆನಸಿಡಿ
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ಸ್ವಲ್ಪ ಬೆಲ್ಲ ಸುಮಾರಾಗಿ 1/2 tsp
  • 1/2 ಕಪ್ ನೀರು

ಒಗ್ಗರಣೆಗೆ :

  • 1 tsp ಎಣ್ಣೆ
  • 1/4 tsp ಸಾಸಿವೆ
  • ಇಂಗು
  • 6 ಕರಿಬೇವಿನ ಎಲೆಗಳು

Instructions
 

  • ಮಿಕ್ಸರಿಗೆ ಕಾಯಿ, ಈರುಳ್ಳಿ,ಉಪ್ಪು, ಹಸಿರುಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಜೊತೆಗೆ ನೆನಸಿಟ್ಟ ನೀರನ್ನು ಹಾಕಿ ಮತ್ತು 1/4 ಕಪ್ ನೀರನ್ನು ಹಾಕಿ.
  • ಅದನ್ನು ಸಣ್ಣಗೆ ರುಬ್ಬಿ . ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ಚಟ್ನಿಯ ಹದಕ್ಕೆ ತಿರುವಿ .
  • ಚಟ್ನಿ ಈಗ ರೆಡಿ. ಒಂದು ಪಾತ್ರೆಗೆ ತೆಗೆದು ಒಗ್ಗರಣೆ ಹಾಕಿದರೆ ಸವಿಯಲು ಸಿದ್ದ.
  • ಒಗ್ಗರಣೆಗೆ ಒಂದು ಸೌಟಿಗೆ ಚಮಚ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಮೇಲೆ ಸಾಸಿವೆ, ಇಂಗು ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಒಲೆ ಆರಿಸಿ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ.
  • ರುಚಿಯಾದ ಈ ಚಟ್ನಿಯನ್ನು ದೋಸೆ, ರೊಟ್ಟಿ, ಚಪಾತಿ ಹಾಗು ಇಡ್ಲಿ ಜೊತೆಯಲ್ಲಿ ಸವಿಯಿರಿ.
Keyword Chutney, Side Dishes