ಹಾಗಲಕಾಯಿ ಅರೋಗ್ಯಕ್ಕೆ ಬಹಳ ಒಳ್ಳೆಯ ತರಕಾರಿ. ಜೀರ್ಣಶಕ್ತಿ ಹೆಚ್ಚಿಸಲು, ಕಣ್ಣಿನ ಅರೋಗ್ಯಕ್ಕೆ, ರಕ್ತ ಶುದ್ಧೀಕರಣಕ್ಕೆ ಹಾಕು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಹಾಗಲಕಾಯಿ ಗೊಜ್ಜು ಇಲ್ಲವೆ ಕಾಯಿರಸ ಮಾಡಲು ಸುಲಭ ಮತ್ತು ರುಚಿ ಹಾಗು ಆರೋಗ್ಯ .
hagalakayi kayirasa recipe ಹಾಗಲಕಾಯಿ ಕಾಯಿರಸ/ಗೊಜ್ಜು
Ingredients
- 2 ಹಾಗಲಕಾಯಿ /hagalakayi
- 1 ಕಪ್ ಕಾಯಿತುರಿ
- ಸಣ್ಣ ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು ನೀರಿನಲ್ಲಿ ನೆನಸಿಡಿ
- 1 ನಿಂಬಹಣ್ಣಿನ ಗಾತ್ರದಷ್ಟು ಬೆಲ್ಲ
- 1/2 tsp ಸಾಸಿವೆ
- 1 tsp ಉಪ್ಪು
- 10 ರಿಂದ 12 ಹಸಿರುಮೆಣಸಿನಕಾಯಿ ಖಾರ ಕಮ್ಮಿ ಬೇಕಾದಲ್ಲಿ ಮೆಣಸಿನಕಾಯಿ ಕಮ್ಮಿ ಹಾಕಿ
- 1/4 tsp ಅರಿಶಿಣ
- 2 ರಿಂದ 3 ಕಪ್ ನೀರು
- 1 TBSP ಉದ್ದಿನಬೇಳೆ
- 10 ರಿಂದ 15 ಕರಿಬೇವಿನ ಸೊಪ್ಪು
- ಸ್ವಲ್ಪ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ
- 2 TBSP ಎಣ್ಣೆ
- 1/2 tsp ಸಾಸಿವೆ
- 1/2 tsp ಉದ್ದಿನಬೇಳೆ
Instructions
- ಗೊಜ್ಜಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳಿ.
- ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ.
- ಬಾಣಲೆಗೆ ಎರಡು ಚಮಚ ಎಣ್ನೆಯನ್ನು ಹಾಕಿ ಮೀಡಿಯಮ್ ಉರಿಯಲ್ಲಿ ಕಾಯಲು ಇಡಿ.ಎಣ್ಣೇ ಕಾದಮೇಲೆ ಒಗ್ಗರಣೆಗೆ ಹೇಳಿರುವ ಸಾಸಿವೆಯನ್ನು ಹಾಕಿ, ಸಾಸಿವೆ ಚಟಗುಟ್ಟಿದಮೇಲೆ ಉದ್ದಿನಬೇಳೆಯನ್ನು ಹಾಕಿ ಅದು ಕೆಂಪಾದಮೇಲೆ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ. ಇದಕ್ಕೆ ಕರಿಬೇವು ಮತ್ತು ಅರ್ಶಿಣವನ್ನೂ ಹಾಕಿ ಕಲಕಿ.
- ಇದನ್ನು 6 ರಿಂದ 7 ನಿಮಿಷ ಚೆನ್ನಾಗಿ ಹುರಿಯಿರಿ.
- ಇನ್ನೊಂದು ಸೌಟಿನಲ್ಲಿ ಉದ್ದಿನಬೇಳೆಯನ್ನು ಎಣ್ಣೆಹಾಕದೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
- ಮಿಕ್ಸರಿನಲ್ಲಿ ಕಾಯಿ, ಮೆಣಸಿನಕಾಯಿ, ಹುಣಸೆಹಣ್ಣು(ನೀರಿನ ಜೊತೆಗೆ ) ಸಾಸಿವೆ, ಹುರಿದ ಉದ್ದಿನಬೇಳೆ ಎಲ್ಲವನ್ನೂ ಹಾಕಿ ತರಿಯಾಗಿ ರುಬ್ಬಿ. ನೀರು ಬೇಕಾದಲ್ಲಿ ಹಾಕಿ ರುಬ್ಬಿ .
- ಇದನ್ನು ಹುರಿಯುತ್ತಿರುವ ಹಾಗಲಕಾಯಿಗೆ ಹಾಕಿ, ಬೆಲ್ಲ, ನೀರು, ಮತ್ತು ಉಪ್ಪನ್ನೂ ಹಾಕಿ 8 ರಿಂದ 10 ನಿಮಿಷಗಳು ಚೆನ್ನಾಗಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ಕುದಿಸಿ.
- ಈಗ ಒಲೆಯಾರಿಸಿ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಹಾಗಲಕಾಯಿ ಕಾಯಿ ರಸ/ ಗೊಜ್ಜು ಸವಿಯಲು ಸಿದ್ಧ . ಇದನ್ನು ಅನ್ನದ ಜೊತೆಯಲ್ಲಿ ಇಲ್ಲವೆ ದೋಸೆ, ರೊಟ್ಟಿ, ಚಪಾತಿಯ ಜೊತೆಯಲ್ಲೂ ತಿನ್ನಬಹುದು . ಚೆನ್ನಗಿ ಕುದಿಸಿಟ್ಟರೆ 2 ದಿನ ಇಟ್ಟು ಕೂಡ ತಿನ್ನಬಹುದು.