ನಮ್ಮ ದಿನ ನಿತ್ಯದ ಊಟದಲ್ಲಿ ಹುಳಿ ಅಥವಾ ಸಾಂಬಾರ್ ಮುಖ್ಯವಾದ ಅಡುಗೆ. ದಿವಸವೂ ಒಂದೇ ತರಹ ತಿನ್ನಲು ಬೇಜಾರು. ಅದಕ್ಕಾಗಿ ವಿಧ ವಿಧವಾದ ರೀತಿಯಲ್ಲಿ, ಬೇರೆ ಬೇರೆ ತರಕಾರಿಗಳೊಡನೆ ತಯಾರಿಸುವ ಈ ಹುಳಿ ಇಲ್ಲವೆ ಸಾಂಬಾರ್ ಎವರ್ ಗ್ರೀನ್.
Mixed vegetable Sambar ಮಿಶ್ರ ತರಕಾರಿ ಹುಳಿ
Ingredients
- 1/2 ಕಪ್ ತೊಗರಿ ಬೇಳೆ
- ಸ್ವಲ್ಪ ಹುರುಳಿಕಾಯಿ
- 1 ನವಿಲು ಕೋಸು
- 3 ಚಿಕ್ಕ ಕ್ಯಾರೆಟ್ ಇಲ್ಲವೆ ಒಂದು ದೊಡ್ಡ ಕ್ಯಾರೆಟ್
- ಸ್ವಲ್ಪ ಅರಿಶಿಣ
- 1/2 tsp ಬೆಲ್ಲ
- 2 tsp ಉಪ್ಪು ಇಲ್ಲವೆ ಉಪ್ಪು ರುಚಿಗೆ ತಕ್ಕಷ್ಟು
- 4 to 5 ಕಪ್ ನೀರು
ಮಸಾಲೆಗೆ
- 4 to 5 ಬ್ಯಾಡಗಿ ಮೆಣಸಿನ ಕಾಯಿ
- 4 tsp ಕೊತ್ತಂಬರಿ ಬೀಜ
- 1 tsp ಮೆಂತ್ಯ
- 1/4 tsp ಎಣ್ಣೆ
ಮಸಾಲೆ ತಿರುವಲು/ರುಬ್ಬಲು
- 1/2 ಕಪ್ ಕಾಯಿ
ಒಗ್ಗರಣೆಗೆ :
- 2 tsp ಎಣ್ಣೆ ಇಲ್ಲವೆ ತುಪ್ಪ
- 1 tsp ಸಾಸಿವೆ
- ಸ್ವಲ್ಪ ಇಂಗು
- 1 ಕೆಂಪು ಮೆಣಸಿನ ಕಾಯಿ
Instructions
- ಮೊದಲು ಬೇಳೆ ಮತ್ತು ತರಕಾರಿಗಳನ್ನು ಚೆನ್ನಗಿ ತೊಳೆದಿಟ್ಟುಕೊಳ್ಳಿ.
- ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಯಲು ಇಡಬೇಕು .
- ಹುರುಳಿಕಾಯಿಯನ್ನು ಒಂದು ಇಂಚು ಉದ್ದಕ್ಕೆ ಮುರಿದಿಟ್ಟು ಕೊಂಡು, ಕ್ಯಾರೆಟ್ಟಿನ ಮತ್ತು ನವಿಲು ಕೋಸಿನ ಸಿಪ್ಪೆಯನ್ನು ತೆಗೆದು ಅದನ್ನು ಚಿಕ್ಕ ಹೊಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು.
- ತೊಳೆದಿಟ್ಟ ಬೇಳೆಗೆ 2 ಕಪ್ ನೀರು ,ಅರಿಶಿಣ, 1/4 ಚಮಚ ಎಣ್ಣೆ ಹಾಗು ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ 2 ಕೂಗು ಬರುವಷ್ಟು ಬಿಡಿ.
- ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಬೀಜ,ಮಂತ್ಯ ಮತ್ತು ಮೆಣಸಿನ ಕಾಯಿಯನ್ನು ಹಾಕಿ ಮೆಂತ್ಯ ಕೆಂಪಗಾಗುವಷ್ಟು ಹುರಿದಿಟ್ಟುಕೊಳ್ಳಿ .
- ಹುರಿದ ಮಸಾಲೆಯನ್ನು ಕಾಯಿ ಮತ್ತು ಹುಣಸೆ ಹಣ್ಣಿನೊಡನೆ ಸುಮಾರಾಗಿ ಸಣ್ನಗೆ ರುಬ್ಬಿಕೊಳ್ಳಿ.
- ಕುಕ್ಕರ್ ಆರಿದ ಮೇಲೆ ಬೆಂದ ಬೇಳೆ ಮತ್ತು ತರಕಾರಿಯನ್ನು ಒಂದು ದೊಡ್ಡ ಪಾತ್ರೆಗೆ ತೆಗೆದುಕೊಳ್ಳಿ .
- ಅದಕ್ಕೆ ತಿರುವಿಕೊಂಡ ಮಿಶ್ರಣ, ಉಪ್ಪು ಮತ್ತು ನೀರನ್ನು ಹಾಕಿ ಕಲಸಿ ಸುಮಾರಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು .
- ಬೇಕಾದಲ್ಲಿ ಕರಿಬೇವಿನ ಸೊಪ್ಪನ್ನೂ ಹಾಕಬಹುದು. ಹುಳಿಯ ಮೇಲುಗಡೆ ನೊರೆ ನೊರೆಯಾಗಿ ಬಂದಾಗ ಉರಿಯನ್ನು ಆರಿಸಿ. ಹುಳಿ ತಯಾರು .
ಒಗ್ಗರಣೆ
- 2 ಟಿ ಚಮಚ ಎಣ್ನೆಯನ್ನು ಒಗ್ಗರಣೆ ಸೌಟಿನಲ್ಲಿ ಒಲೆಯ ಮೇಲಿಟ್ಟು ಅದಕ್ಕೆ ಇಂಗು ಸಾಸಿವೆ ಹಾಕಿ , ಸಾಸಿವೆ ಚಟಗುಟ್ಟಿದ ಮೇಲೆ ಮೆಣಸಿನಕಾಯಿಯನ್ನು ಮುರಿದು ಹಾಕಿ ಉರಿಯನ್ನು ಆರಿಸಿ .
- ಈ ಒಗ್ಗರಣೆಯನ್ನು ತಯಾರಿಸಿರುವ ಹುಳಿಗೆ ಹಾಕಿದರೆ ರುಚಿಕರವಾದ ಮಿಶ್ರ ತರಕಾರಿ ಹುಳಿ ಸವಿಯಲು ಸಿದ್ಧ . ಅನ್ನ ಹಾಗು ರಾಗಿ ಮುದ್ದೆಯೊಡನೆ ಬಲು ರುಚಿ .
Notes
For recipe in English click here: Mixed Vegetable Sambar