Dill leaves/sabsige soppu is very healthy greens, helps to boost the digestion, helps in reducing insomnia, menstrual and respiratory discomforts and so on. Our Ayurvedic doctor said chewing on handful of the raw dill greens everyday helps to protect against the arthritis. Coming to the recipe we are using this dill leaves along with the toor dal to make a healthy palya goes well as side dish to rasam rice, sambar rice. Simple yet delicious.
ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ಕಡಿಮೆ ಮಾಡುವಂತಹ ಒಂದು ಗುಣವಿರುವ ಸೊಪ್ಪು. ಪಚನ ಕ್ರಿಯೆಗೆ ಸಹಕಾರಿ. ದಿನವೂ ಸ್ವಲ್ಪ ಹಸಿ ಸೊಪ್ಪನ್ನು ತಿನ್ನುವುದರಿಂದ arthritis ತಡಿಯಬಹುದು. ಆರೋಗ್ಯಕರ ಸೊಪ್ಪು ಮತ್ತು ಪ್ರೋಟೀನ್ ಭರಿತ ಬೇಳೆ ಸೇರಿಸಿ ಮಾಡುವ ಸುಲಭ ರೆಸಿಪಿ ಈ ಸೊಪ್ಪಿನ ಉದುರು ಪಲ್ಯ.
ತೊಗರಿಬೇಳೆ ಸಬ್ಸಿಗೆಸೊಪ್ಪಿನ ಪಲ್ಯ Toor dal and Dill Palya
Ingredients
- 1 ಕಪ್ ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು
- 3/4 ಕಪ್ ತೊಗರಿ ಬೇಳೆ
- 1/4 tsp ಅರಿಶಿಣ
- 1 ಕಪ್ ನೀರು
- 1/4 ಕಪ್ ಕಾಯಿ ತುರಿ
ಒಗ್ಗರಣೆ:
- 3 tsp ಎಣ್ಣೆ
- ಸ್ವಲ್ಪ ಇಂಗು
- 1 tsp ಸಾಸಿವೆ
- 1 tsp ಜೀರಿಗೆ
- 2 ಕೆಂಪು ಮೆಣಸಿನಕಾಯಿ
Instructions
- ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಾಗೇ ಬೇಳೆಯನ್ನೂ ಕೂಡ ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ, ಹೆಚ್ಚಿದ ಸೊಪ್ಪು ಮತ್ತು ನೀರನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ ೨ ಕೂಗು ಕೂಗಿಸಿ . ಕುಕ್ಕರ್ ಆರಿದ ಮೇಲೆ ಒಗ್ಗರಣೆಗಿಡಿ.
- ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಮೀಡಿಯಮ್ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಕಾದಮೇಲೆ ಸಾಸಿವೆ, ಇಂಗು, ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ನಂತರ ಮುರಿದ ಒಣಮೆಣಸಿನಕಾಯಿ ತುಂಡನ್ನು ಹಾಕಿ ಕಲಕಿ .
- ಈಗ ಇದಕ್ಕೆ ಬೆಂದಿರುವ ಬೇಳೆ ಹಾಗು ಸೊಪ್ಪಿನ ಮಿಶ್ರಣವನ್ನೂ ಜೊತೆಗೆ ಉಪ್ಪು, ಕರಿಬೇವಿನ ಸೊಪ್ಪನ್ನೂ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆ ಒಲೆಯಮೇಲಿಟ್ಟಿರಿ .
- ಐದು ನಿಮಿಷ ಆದಮೇಲೆ ಒಲೆಯನ್ನಾರಿಸಿ ಸೊಪ್ಪಿಗೆ ಕಾಯಿ ಹಾಕಿ ಕಲಸಿ.
- ಈಗ ನಿಮಗೆ ಆರೋಗ್ಯಕರ ಬೇಳೆ ಮತ್ತು ಸೊಪ್ಪಿನ ಪಲ್ಯ ತಿನ್ನಲು ಸಿದ್ಧ. ಇದನ್ನು ಸಾರಿನ ಜೊತೆ, ಚಪಾತಿ, ರೊಟ್ಟಿ ಜೊತೆಯಲ್ಲೂ ಸವಿಯಬಹುದು.
Notes
- ಬೇಳೆ ಬೇಯಿಸುವುದಕ್ಕೆ ತುಂಬಾ ನೀರನ್ನು ಹಾಕಬೇಡಿ.