ಕಾಯಿ ರಸ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ತೀರ ಪ್ರದೇಶದ ಒಂದು ಖಾದ್ಯ. ತರಕಾರಿ ಜೊತೆಯಲ್ಲಿ ತಯಾರಿಸುವ ಈ ಹಸಿ ಕಾಯಿರಸ ಅನ್ನದ ಜೊತೆಯಲ್ಲಿ ರುಚಿಯಾಗಿರತ್ತೆ. ಇಲ್ಲಿ ನಾವು ಹುರುಳಿಕಾಯಿಯನ್ನು ಉಪಯೋಗಿಸಿ ಕಾಯಿರಸ ಮಾಡಿರೋದು.
ಹುರುಳಿಕಾಯಿ ಹಸಿ ಕಾಯಿರಸ How To make green beans kayi rasa
Ingredients
- 1/4 kg ಹುರುಳಿಕಾಯಿ ಇಲ್ಲವೆ ಸುಮಾರಾಗಿ 30 ಬೀನ್ಸ್
- 1 ಕಪ್ ಕಾಯಿ ತುರಿ
- 1 tsp ಉದ್ದಿನಬೇಳೆ
- ಸುಮಾರಾಗಿ 1 ಕಪ್ ನೀರು
- 3 ರಿಂದ 4 ಹಸಿರುಮೆಣಸಿನ ಕಾಯಿ ಹೆಚ್ಚು ಅಥವ ಕಡಿಮೆ ಮಾಡಿಕೊಳ್ಳಬಹುದು
- 1 ಸಣ್ಣ ನಿಂಬೆಹಣ್ಣಿನ ರಸ
- ಚಿಟಕಿ ಅರಿಶಿಣ
- 1/2 tsp ಉಪ್ಪು ಇಲ್ಲವೆ ರುಚಿಗೆ ತಕ್ಕಷ್ಟು
- ಸ್ವಲ್ಪ ಕರಿಬೇವಿನ ಸೊಪ್ಪು
- ಹೆಚ್ಚಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ:
- 1/2 tsp ತುಪ್ಪ
- 1/2 tsp ಸಾಸಿವೆ
- 1/2 tsp ಉದ್ದಿನ ಬೇಳೆ
Instructions
- ಹುರುಳಿಕಾಯಿಗಳನ್ನು ತೊಳೆದು ಒಂದು ಇಂಚು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ .
- ಒಂದು ಕಪ್ ನೀರನ್ನು ಕುದಿಯಲು ಇಡಿ , ನೀರು ಕುದ್ದ ನಂತರ ಅದಕ್ಕೆ ಹೆಚ್ಚಿತ್ತ ಹುರುಳಿಕಾಯಿ,ಅರಿಶಿಣ,ಉಪ್ಪು ಮತ್ತು ಕರಿಬೇವನ್ನು ಹಾಕಿ. ಹೋಳು ಬೆಂದಮೇಲೆ ಅದನ್ನು ಆರಲು ಬಿಡಿ.
- ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಹಾಗೆ ಕೆಂಪಾಗುವಷ್ಟು ಹುರಿದಿಟ್ಟುಕೊಳ್ಳಿ .
- ಕಾಯಿ, ಮೆಣಸಿನಕಾಯಿ, ಮತ್ತು ಹುರಿದ ಬೇಳೆಯನ್ನು ಸ್ವಲ್ಪ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿಕೊಂಡು ಅದನ್ನು ಬೆಂದು ಆರಿದ ಹುರುಳಿಕಾಯಿಗೆ ಸೇರಿಸಿ ಕಲಸಿ. ಅದಕ್ಕೆ ನಿಂಬೆಹಣ್ಣಿನ ರಸ ಬೆರಸಿ .
- ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಗಿಟ್ಟು, ಅದಕ್ಕೆ ಸಾಸಿವೆ ಹಾಕಿ. ಸಾಸಿವೆ ಚಟಗುಟ್ಟಿದ ಮೇಲೆ ಉದ್ದಿನ ಬೇಳೆ ಹಾಕಿ ಅದನ್ನು ಕೆಂಪಾಗುವಷ್ಟು ಹುರಿದು, ತಯಾರಾದ ಒಗ್ಗರಣೆಯನ್ನು ಮೇಲಿನ ಮಿಶ್ರಣಕ್ಕೆ ಹಾಕಿ ಕಲಸಿದರೆ ರುಚಿಯಾದ ಹಸಿ ಕಾಯಿರಸ ಅನ್ನದೊಡನೆ ಸವಿಯಲು ಸಿದ್ದ.
Notes
For English version please visit the link below.:
Green beans Kayirasa